ಗುರ್ ಗಾಂವ್ ನಲ್ಲಿ ಕೇರಳ ಟೆಕ್ಕಿ ಬರ್ಬರ ಹತ್ಯೆ

23 ವರ್ಷ ವಯಸ್ಸಿನ ಸಿನ್ಸಿ ಸೆಬಾಸ್ಟಿಯನ್ ಎಂಬ ಮಹಿಳೆಯ ಕೊರಳು ಕೊಯ್ದು ಹತ್ಯೆ ಮಾಡಲಾಗಿದೆ. ಗುರ್ ಗಾಂವ್ ನ ಡಿಎಲ್ ಫಿ ನಗರದ ಶ್ರೀಮಂತ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ಸಿನ್ಸಿ ತನ್ನ ಸಹದ್ಯೋಗಿಗಳೊಂದಿಗೆ ವಾಸಿಸುತ್ತಿದ್ದರು ಎಂದು ಡಿಸಿಪಿ ಮಹೇಶ್ವರ್ ದಯಾಳ್ ಹೇಳಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಘಟನೆ ನಡೆದ ದಿನದಂದು ಮೂರ್ನಾಲ್ಕು ಜನ ಆಗುಂತಕರು ಸಿನ್ಸಿ ಮನೆಗೆ ನುಗ್ಗಿದ್ದಾರೆ. ಆ ಸಂದರ್ಭದಲ್ಲಿ ಸಿನ್ಸಿ ಮನೆಯಲ್ಲಿ ಒಬ್ಬಳೇ ಇದ್ದಳು. ಕಳ್ಳತನದ ಉದ್ದೇಶದಿಂದ ಮನೆಗೆ ಹೊಕ್ಕವರು, ಆಕೆಯನ್ನು ಕೊಂದಿರಬಹುದು ಎಂಬ ವಾದವನ್ನು ಪೊಲೀಸರು ತಳ್ಳಿಹಾಕಿದ್ದಾರೆ.
ಸಿನ್ಸಿಯನ್ನು ಯಾರೋ ಉದ್ದೇಶಪೂರ್ವಕವಾಗಿ ಕೊಂದಿರುವ ಸಾಧ್ಯತೆಯಿದೆ. ಮನೆಯಿಂದ ಯಾವುದೇ ವಸ್ತು ಕಳುವಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಅನೇಕ ಪ್ರತಿಷ್ಠಿತ ಕಂಪನಿಗೆ ಸೇರಿದ ಉದ್ಯೋಗಿಗಳು ಈ ಬಡಾವಣೆಯಲ್ಲಿ ವಾಸಿಸುತ್ತಿದ್ದು, ಈ ಘಟನೆ ನಂತರ ಸುರಕ್ಷತೆಯ ಬಗ್ಗೆ ಆತಂಕ ಶುರುವಾಗಿದೆ. ಇನ್ನೊಂದೆಡೆ ರಿಯಲ್ ಎಸ್ಟೇಟ್ ವ್ಯವಹಾರಕ್ಕೂ ಈ ಘಟನೆ ಮುಳುವಾಗುವ ಸಾಧ್ಯತೆಯಿದ್ದು, ಅನೇಕರು ಬಡಾವಣೆ ತೊರೆಯುವ ನಿಟ್ಟಿನಲ್ಲಿ ಚಿಂತಿಸಿದ್ದಾರೆ.
ಈ ನಡುವೆ ಅಪಾರ್ಟ್ಮೆಂಟ್ ಮಾಲೀಕರು ಹಾಗೂ ಸ್ಥಳೀಯ ನಾಗರೀಕ ಸಮಿತಿ ಘಟನೆ ಬಗ್ಗೆ ತೀವ್ರ ತನಿಖೆ ಕೈಗೊಳ್ಳುವಂತೆ ಪೊಲೀಸರಿಗೆ ಆಗ್ರಹಿಸಿದ್ದಾರೆ.












Click it and Unblock the Notifications