Q3 : ಶೇ 33.25 ಪ್ರಗತಿ ಸಾಧಿಸಿದ ಇನ್ಫೋಸಿಸ್

ಆದಾಯದಲ್ಲಿ ಕಳೆದ ವರ್ಷ ಶೇ. 24.2ರಷ್ಟು ಪ್ರಗತಿ ಸಾಧಿಸಿದ್ದ ಕಂಪನಿ, ಈ ವರ್ಷವೂ ಅದನ್ನು ಉತ್ತಮ ಪಡಿಸಿಕೊಂಡಿದ್ದು ಶೇ. 26.8 ಗಳಿಕೆ ಸಾಧಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿ 1,780 ಕೋಟಿ ರು. ನೆಟ್ ಪ್ರಾಫಿಟ್ ಗಳಿಸಿತ್ತು. ಇನ್ಫಿ ಲಾಭ ಸಮಾಧಾನಕರವಾಗಿದೆ. ರೂಪಾಯಿ ಮೌಲ್ಯ ಕುಸಿತ ಇನ್ಫೋಸಿಸ್ ತ್ರೈಮಾಸಿಕ ಫಲಿತಾಂಶದ ಮೇಲೆ ಪ್ರಭಾವ ಬೀರಿದೆ ಎಂದು ಮಾರುಕಟ್ಟೆ ವಿಶ್ಲೇಷಣೆ ಹೇಳಿದೆ.
ದೇಶದ ಎರಡನೆಯ ಐಟಿ ದಿಗ್ಗಜ ಇನ್ಫಿ, ಕನ್ಸಾಲಿಡೇಟೆಡ್ ರೆವೆನ್ಯೂ ಶೇ. 30.8ರಷ್ಟು ಏರಿಕೆ ಕಂಡಿದ್ದು, 9,298 ಕೋಟಿ ರು.ಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಮೊತ್ತ 7,106 ಕೋಟಿ ರು. ಇತ್ತು.
ಮಾರ್ಚ್ 31, 2012ಕ್ಕೆ ಕೊನೆಗೊಳ್ಳುವ ತ್ರೈಮಾಸಿಕ ಫಲಿತಾಂಶದಲ್ಲಿ ಇನ್ಫೋಸಿಸ್ ಕಂಪನಿಯು 9,412 ಕೋಟಿ ರು. ಆದಾಯ ನಿರೀಕ್ಷೆ ಹೊಂದಿದೆ ಎಂದು ಕಂಪನಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಸ್ ಡಿ ಶಿಬುಲಾಲ್ ಆಶಿಸಿದ್ದಾರೆ.
ಡಿಸೆಂಬರ್ 31, 2011 ಅಂತ್ಯಕ್ಕೆ ಕಂಪನಿಯಲ್ಲಿ 1,45,088 ಉದ್ಯೋಗಿಗಳು ಇದ್ದಾರೆ. ಕಳೆದ ಡಿಸೆಂಬರ್ ತ್ರೈಮಾಸಿಕ ದಲ್ಲಿ ಕಂಪನಿಯು 49 ಹೊಸ ಗ್ರಾಹಕ ಕಂಪನಿಗಳನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಂಡಿದೆ.












Click it and Unblock the Notifications