ಬಳಸಿದ ಒಳಚಡ್ಡಿ ಬಳಕೆಗೆ ಜಿಂಬಾಬ್ವೆ ನಿಷೇಧ

ಶೇ. 80ರಷ್ಟು ನಿರುದ್ಯೋಗದಿಂದ ಒದ್ದಾಡುತ್ತಿರುವ, ಬಡತನ ರೇಖೆಗಿಂತ ಸಾಕಷ್ಟು ಕೆಳಗಿರುವ ಬಿಂಬಾಬ್ವೆ ಕೂಡ ಇದನ್ನೇ ಮಾಡಿದೆ. ಚಡ್ಡಿ ಹಾಕ್ಕೊಂಡು ಓಡಾಡದಿದ್ದರೂ ಪರವಾಗಿಲ್ಲ ಬಳಸಿದ ಒಳಚಡ್ಡಿಯನ್ನು ತಮ್ಮ ನಾಗರಿಕರು ಬಳಸಬಾರದೆಂದು, ಸೆಕೆಂಡ್ ಹ್ಯಾಂಡ್ ಚಡ್ಡಿಗಳ ಆಮದು ಮತ್ತು ಮಾರಾಟವನ್ನು ಜಿಂಬಾಬ್ವೆಯ ಹಣಕಾಸು ಸಚಿವ ಟೆಂಡೈ ಬಿಟಿ ನಿಷೇಧಿಸಿದ್ದಾರೆ.
"ನೀವು ಮದುವೆಯಾಗಿದ್ದು, ನಿಮ್ಮ ಹೆಂಡತಿ ಬಳಸಲಾದ ಒಳಚಡ್ಡಿ ಖರೀದಿಸುತ್ತಿದ್ದರೆ, ಅದು ನಿಮ್ಮ ಸೋಲು. ನಾನು ನಿಮ್ಮ ಅತ್ತೆಯಾಗಿದ್ದರೆ, ನನ್ನ ಮಗಳನ್ನು ವಾಪಸ್ ಕರೆದುಕೊಂಡು ಹೋಗಿ, ನಿಮ್ಮ ಸ್ಥಿತಿ ಸರಿಹೋಗುವವರೆಗೆ ವಾಪಸ್ ಕಳಿಸುತ್ತಿರಲಿಲ್ಲ" ಎಂದಿ ಬಿಟಿ ಸಂದೇಶ ರವಾನಿಸಿದ್ದಾರೆ.
ಈ ನಿಷೇಧದಿಂದ ಜನರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬರುತ್ತದೆ ಮತ್ತು ಜವಳಿ ಉದ್ಯಮವನ್ನು ಉತ್ತೇಜಿಸಿದಂತಾಗುತ್ತದೆ ಎಂದು ಅತ್ಯಂತ ಬಡ ರಾಷ್ಟ್ರಗಳಲ್ಲಿ ಒಂದಾಗಿರುವ ಜಿಂಬಾಬ್ವೆ ಈ ದಿಟ್ಟ ಕ್ರಮ ತೆಗೆದುಕೊಂಡಿದೆ. ಇಂಥದೇ ನಿಷೇಧವನ್ನು ಘಾನಾ ರಾಷ್ಟ್ರ ಕೂಡ ಹೇರಿದೆ.












Click it and Unblock the Notifications