ಉತ್ತರಪ್ರದೇಶ ಚುನಾವಣೆ ಫಲಿತಾಂಶ ಔಟ್

ಈ ಮಧ್ಯೆ ಕಾಂಗ್ರೆಸ್ ಮತ್ತು ಬಿಜೆಪಿ ನಡೆಸಿದ ತಮ್ಮ ತಮ್ಮ ಆಂತರಿಕ ಚುನಾವಣಾ ಸಮೀಕ್ಷೆಯ ಪ್ರಕಾರ ಯಾವುದೇ ಪಕ್ಷಕ್ಕೆ ಬಹುಮತ ಸಿಗುವುದಿಲ್ಲ.
ಈ ಸಮೀಕ್ಷೆಯ ಸಾರಾಂಶವನ್ನು ಟೈಮ್ಸ್ ನೌ ಟಿವಿ ವಾಹಿನಿ ಬುಧವಾರದ ( ಜ 11) ತನ್ನ ಬುಲೆಟಿನ್ ನಲ್ಲಿ ಹೇಳಿದೆ.
ಫೆಬ್ರವರಿ ಎಂಟರಿಂದ ಆರು ಹಂತದಲ್ಲಿ ನಡೆಯುವ ಚುನಾವಣೆಯಲ್ಲಿ ಬಿಎಸ್ಪಿ, ಎಸ್ಪಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಶತಾಯುಗತಾಯು ಗದ್ದುಗೆ ಏರಬೇಕೆನ್ನುವ ಹಠದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದೆ.
ಕೋಟಿಗಟ್ಟಳೆ ಲೆಕ್ಕದಲ್ಲಿ ಹಣವನ್ನು ಈಗಾಗಲೇ ಚುನಾವಣಾ ಆಯೋಗ ವಶಪಡಿಸಿಕೊಂಡಿದೆ.
ಕಾಂಗ್ರೆಸ್ ಸಮೀಕ್ಷೆ :
ಕಾಂಗ್ರೆಸ್: 115
ರಾಷ್ಟ್ರೀಯ ಲೋಕದಳ - 12
ಸಮಾಜವಾದಿ ಪಕ್ಷ: 69
ಬಹುಜನ ಸಮಾಜಪಕ್ಷ: 95
ಭಾರತೀಯ ಜನತಾಪಕ್ಷ: 113
ಬಿಜೆಪಿ ಸಮೀಕ್ಷೆ
ಕಾಂಗ್ರೆಸ್: 45
ಇತರರು - 14
ಸಮಾಜವಾದಿ ಪಕ್ಷ: 140
ಬಹುಜನ ಸಮಾಜಪಕ್ಷ: 120
ಭಾರತೀಯ ಜನತಾಪಕ್ಷ: 85












Click it and Unblock the Notifications