ಸಿಕ್ಸರ್ ಸಿದ್ದು ಪತ್ನಿ ಕೂಡಾ ಕೋಟ್ಯಾಧೀಶೆ

ಅಮೃತಸರದ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೇಟ್ ಪಡೆದಿರುವ ಕೌರ್ ಅವರು ನಾಮಪತ್ರ ಸಲ್ಲಿಸಲು ಪತಿ ಸಿದ್ದು ಜೊತೆ ಸೈಕಲ್ ನಲ್ಲಿ ಬಂದಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಆಸ್ತಿವಿವರಗಳನ್ನು ಕೌರ್ ಅವರು ಸಲ್ಲಿಸಿದ್ದಾರೆ. 2010-11ರ ಐಟಿ ರಿಟರ್ನ್ಸ್ ಮಾಹಿತಿಯಂತೆ ಒಟ್ಟು ಆದಾಯ 11,50,030 ಆಗಿದೆ. ಚರಾಸ್ಥಿಯಲ್ಲಿ ಕೌರ್ 77 ಲಕ್ಷ ರೂ ಹಾಗೂ ಸಿದ್ದು 7.13 ಕೋಟಿ ರೂ ಹೊಂದಿದ್ದಾರೆ.
ಸ್ಥಿರಾಸ್ಥಿಯಲ್ಲಿ ಕೌರ್ 2.38 ಕೋಟಿ ರು ಹೊಂದಿದ್ದರೆ, ಪತಿ ಸಿದ್ದು 12 ಕೋಟಿ ರು ಆಸ್ತಿ ಹೊಂದಿದ್ದಾರೆ.
ಇಬ್ಬರ ಬಳಿ ಐಷಾರಾಮಿ ಕಾರುಗಳಿದ್ದು, 11 ಲಕ್ಷ ಬೆಲೆಯ ಟಯೋಟಾ ಲ್ಯಾಂಡ್ ಕ್ರೂಸರ್, ಎರಡು ಬಿಎಂಡಬ್ಲ್ಯೂ ಗಳಿದ್ದು 95 ಲಕ್ಷ ಹಾಗೂ 75 ಲಕ್ಷ ರೂ ಮೌಲ್ಯ ಹೊಂದಿದೆ. 21.4 ಲಕ್ಷ ಬೆಲೆಯ ಟಯೋಟಾ ಫಾರ್ಚ್ಯೂನರ್ ವಾಹನ ಕೂಡಾ ಇವರ ಬಳಿ ಇದೆ.












Click it and Unblock the Notifications