ದೇವನಹಳ್ಳಿ ವಿಮಾನ ನಿಲ್ದಾಣ ದಿನಕ್ಕೆ 7 ಗಂಟೆ ಬಂದ್

BIA ಡೆವಲಪರ್ ಸಂಸ್ಥೆಯಾದ GVK ಈ ಸಂಬಂಧ ದೆಹಲಿಯಲ್ಲಿರುವ ನಾಗರಿಕ ವಿಮಾನ ಯಾನ ಮಹಾ ನಿರ್ದೇಶಕರಿಗೆ (DGCA) ಮನವಿ ಸಲ್ಲಿಸಿದೆ. BIA ರನ್ ವೇ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುವ ಉದ್ದೇಶದಿಂದ GVK ಈ ನಿರ್ಧಾರಕ್ಕೆ ಬಂದಿದೆ. ಇದು ಜಾರಿಯಾದರೆ ಫೆ. 25ರಿಂದ ಏ. 19ರವರೆಗೆ ಬೆಳಗ್ಗೆ 10.30 ರಿಂದ ಸಂಜೆ 5.30ರವರೆಗೆ ಇಲ್ಲಿ ವಿಮಾನ ಹಾರಾಟ ಸಂಪೂರ್ಣ ಬಂದ್ ಆಗಲಿದೆ.
ಗಮನಾರ್ಹವೆಂದರೆ ಹೈದರಾಬಾದ್, ಕೊಚ್ಚಿ ಮತ್ತು ಚೆನ್ನೈ ವಿಮಾನ ನಿಲ್ದಾಣಗಳಲ್ಲಿ ವಿಮಾನ ಹಾರಾಟವನ್ನು ಈಗಾಗಲೇ ಪ್ರತಿ ದಿನ ಮೂರು ಗಂಟೆ ಕಾಲ ಸ್ಥಗಿತಗೊಳಿಸಲಾಗಿದೆ. ಅಂದಹಾಗೆ, ಪ್ರಸ್ತುತ ಮಧ್ಯಾಹ್ನದ ವೇಳೆ ಈ ಏರ್ ಪೋರ್ಟ್ ಗಳು ಕಾರ್ಯಸ್ಥಗಿತಗೊಳಿಸುತ್ತಿವೆ.
ಆದರೆ BIA ವಿಮಾನ ಹಾರಾಟ ಸ್ಥಗಿತಗೊಳಿಸುವುದು ಕಾರ್ಯಸಾಧುವೇ? ಎಂಬ ಪ್ರಶ್ನೆ ಎದ್ದಿದೆ. ಏಕೆಂದರೆ ಮಾರ್ಚ್ ಮಾಸಾಂತ್ಯ ಬೇಸಿಗೆ ರಜೆ ಕಾಲ ಶುರುವಾಗಲಿದೆ. ಆತಂಕದ ವಿಷಯವೆಂದರೆ ಅನೇಕ ವಿಮಾನ ಯಾನ ಸಂಸ್ಥೆಗಳು ಈಗಾಗಲೇ ಬೇಸಿಗೆ ಹಾರಾಟ ವೇಳಾಪಟ್ಟಿಯನ್ನು ನಿಗದಿಪಡಿಸಿಕೊಂಡಿವೆ. ಒಂದಷ್ಟು ಬುಕ್ಕಿಂಗ್ ಸಹ ಮುಗಿದಿದೆ. ಅಂತಹುದರಲ್ಲಿ ದಿನಕ್ಕೆ 7 ಗಂಟೆಗಳ ಸುದೀರ್ಘ ಕಾಲ ಏರ್ ಪೋರ್ಟ್ ಕ್ಲೋಸ್ ಆದರೆ ಗತಿಯೇನು? ಎಂದು ವಿಮಾನ ಸೇವಾ ಸಂಸ್ಥೆಗಳು ತಲೆಯ ಮೇಲೆ ಕೈಹೊತ್ತು ಕುಳಿತಿವೆ.












Click it and Unblock the Notifications