ರೇವ್ ಪಾರ್ಟಿ: ವಿನೋದ್ ಖನ್ನಾ ಮಗ ಸಾಕ್ಷಿಗೆ ಬಂಧನ ಭೀತಿ

ಮಾದಕ ದ್ರವ್ಯ ನಿಯಂತ್ರಣ ವಿಭಾಗದ ಹಿರಿಯ ಅಧಿಕಾರಿ ಅನಿಲ್ ಜಾಧವ್ ಸೇರಿದಂತೆ ಸುಮಾರು 300 ಜನರನ್ನು ಪೊಲೀಸರು ಬಂಧಿಸಿದ್ದರು.
ಸೆರೆ ಸಿಕ್ಕಿರುವವರ ಪಟ್ಟಿಯಲ್ಲಿ ಸಾಕ್ಷಿ ಖನ್ನಾ ಹೆಸರು ಸೇರ್ಪಡೆಯಾಗಿದೆ. ಆದರೆ, ಆತ ರೇವ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಸೆರೆ ಸಿಕ್ಕವರ ವಿಳಾಸಗಳು ನಕಲಿಯಾಗಿರುವುದು ಗೊಂದಲಕ್ಕೆ ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರ ಕ್ರಮವನ್ನು ತಪ್ಪಿಸಿಕೊಳ್ಳಲು ಸಾಕ್ಷಿ ತನ್ನ ಮೊಬೈಲ್ ಬ್ಲಾಕ್ ಮಾಡಿದ್ದಾನೆ. ಪೊಲೀಸ್ ಇಲಾಖೆಯಿಂದ ಆತನ ಮೊಬೈಲ್ ಗೆ ಅನೇಕ ಕರೆಗಳು ಬಂದರೂ ಸ್ವೀಕರಿಸಿಲ್ಲ. ಆತನ ಮನೆ ವಿಳಾಸ ನಮ್ಮ ಬಳಿ ಇರುವುದರಿಂದ ಯಾವುದೇ ಕ್ಷಣದಲ್ಲಿ ಬೇಕಾದರೂ ಮುಂದಿನ ಕ್ರಮವನ್ನು ಜರುಗಿಸಬಹುದು ಎಂದು ರೈಗಡ್ ನ ಎಸ್ ಪಿ ನಮ್ರತಾ ಪಾಟೀಲ್ ಹೇಳಿದ್ದಾರೆ.
ಏನಿದು ಪ್ರಕರಣ: 'ಬಿಯಾಂಡ್ ಲಾಜಿಕ್' ಎಂಬ ಕಂಪನಿ ಮುಂಬೈನಿಂದ ಸುಮಾರು 100 ಕಿ.ಮೀ ದೂರವಿರುವ ಹೋಟೆಲ್ ಮೌಂಟ್ ವ್ಯೂನಲ್ಲಿ ರೇವ್ ಪಾರ್ಟಿಯನ್ನು ಆಯೋಜಿಸಿತ್ತು. ಸುದ್ದಿ ತಿಳಿದ ಪೊಲೀಸರು 300ಕ್ಕೂ ಅಧಿಕ ಜನರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.
ಸಾಕ್ಷಿ ಕೈ ಮೇಲೆ ರೇವ್ ಪಾರ್ಟಿ ಅಟೆಂಡ್ ಮಾಡಿದ್ದಕ್ಕೆ ಯಾವ ಸಾಕ್ಷಿ ಇಲ್ಲ. ರೇವ್ ಪಾರ್ಟಿಯಲ್ಲಿ ಭಾಗವಹಿಸುವವರ ಕೈಯ ಮೇಲೆ ಮುದ್ರೆ ಒತ್ತಲಾಗುತ್ತದೆ. ಆದರೆ, ಬಂಧಿತ 207 ಜನರ ಜೊತೆ ಸಾಕ್ಷಿ ಕೂಡಾ ಡ್ರಗ್ಸ್ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿತ್ತು.












Click it and Unblock the Notifications