ಭಗ್ನ ಪ್ರೇಮ: ಯುವತಿಯ ಮೇಲೆ ಆಸಿಡ್ ಸುರಿದ ಪ್ರೇಮಿ
ಕಾನ್ಪುರ,
ಜ.6: ಮದುವೆಯಾಗಲು ನಿರಾಕರಿಸಿದ ಪ್ರೇಮಿ ಭಗ್ನ ಹೃದಯದೊಂದಿಗೆ ಆಕೆಯ ಮೈಮೇಲೆ ಆಸಿಡ್ ಸುರಿದು ವಿಕೃತತನ ಮೆರೆದಿದ್ದಾನೆ. ನಗರದ ಜನನಿಬಿಡ ಬಿರ್ಹಾನಾ ರಸ್ತೆಯಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಪೊಲೀಸರು ಆರೋಪಿಯ ಬೆನ್ನುಹತ್ತಿದ್ದಾರೆ. id="toptextpromo">ಅಪ್ಪ-ಅಮ್ಮ
ಅಸುನೀಗಿದ ಬಳಿಕ ತಮ್ಮನೊಂದಿಗೆ ಜೀವನದ ಬಂಡಿ ಸಾಗಿಸಬೇಕಾದ ಅನಿವಾರ್ಯತೆಗೆ ಸಿಕ್ಕಿದ್ದ ಈ ಯುವತಿ, ಜೀವನೋಪಾಯಕ್ಕಾಗಿ ಪಾನ್ ಅಂಗಡಿ ನಡೆಸುತ್ತಿದ್ದಳು. ಆರೋಪಿ ಸಮೀರ್ ಇಲ್ಲಿನ ಕುಟಿ ಮಾಲ್ ನಿವಾಸಿ. ಬೈಕಿನಲ್ಲಿ ಸ್ನೇಹಿತನ ಜತೆಗೂಡಿ ಬಂದವನೆ ಯುವತಿಯ ಮೇಲೆ ಏಕಾಏಕಿ ಆಸಿಟ್ ಚೆಲ್ಲಿ ಪೈಶಾಚಿಕ ನಗೆ ನಕ್ಕಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. id='are-slot-1' class='oiad oi-axt oiadv'> id='top-searched-articles'>ಇದರಿಂದ
ಯುವತಿಯ ಎದೆ ಭಾಗ ಮತ್ತು ಕೈಗಳಿಗೆ ತೀವ್ರ ಸುಟ್ಟ ಗಾಯಗಳಾಗಿದೆ. ಸ್ಥಳೀಯರು ಯುವತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದೊಂದು ವರ್ಷದಿಂದ ಈ ಯುವತಿ ಮತ್ತು ಸಮೀರ್ ನಡುವೆ ಸ್ನೇಹವಿತ್ತು. ಆದರೆ ಇತ್ತೀಚೆಗೆ ಸಮೀರ್ ಮದುವೆಯಾಗು ಎಂದು ಪೀಡಿಸಿದ್ದ. ಇದಕ್ಕೆ ಒಲ್ಲೆ ಎಂದಾಗ ನಲ್ಲೆಯ ಮೇಲೆ ಇಂತಹ ದುಷ್ಕೃತ್ಯವೆಸಗಿದ್ದಾನೆ.











Click it and Unblock the Notifications