4000 ಉದ್ಯೋಗಿಗಳನ್ನು ಕಿತ್ತು ಹಾಕಲಿದೆ ಪೆಪ್ಸಿ

ಸಂಸ್ಥೆಯ ಖರೀದಿ ವಿಭಾಗದಲ್ಲಿ ಹೆಚ್ಚಿನ ಮಂದಿ ಕೆಲಸ ಕಳೆದುಕೊಳ್ಳುವ ಸಾಧ್ಯತೆಯಿದೆ. 401(k) ಯೋಜನೆ[401(k) ಅಂದರೇನು?]ಗೆ ಅನುಗುಣವಾಗಿ ಉದ್ಯೋಗಳ ಸಂಖ್ಯೆಯನ್ನು ನಿಯಂತ್ರಿಸಿ ಹೆಚ್ಚಿನ ಆದಾಯಗಳಿಕೆಯತ್ತ ಪೆಪ್ಸಿಕೋ ಗಮನಹರಿಸಿದೆ ಎಂದು ದ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಪೆಪ್ಸಿಕೋ ಸಂಸ್ಥೆ 401(k) ಹೊಂದಾಣಿಕೆಯನ್ನು ಬದಿಗೊತ್ತಿದರೆ ಸುಮಾರು 75 ಮಿಲಿಯನ್ ಡಾಲರ್ ಉಳಿಸಬಹುದು ಎನ್ನಲಾಗಿದೆ.
3,00,000ಕ್ಕೂ ಅಧಿಕ ನೌಕರರನ್ನು ಜಾಗತಿಕವಾಗಿ ಹೊಂದಿರುವ ಪೆಪ್ಸಿಕೋ ಸಂಸ್ಥೆಯಲ್ಲಿ 2,000 ಮಂದಿ ಖರೀದಿ ವಿಭಾಗದಲ್ಲಿದ್ದಾರೆ. ಅಗತ್ಯಬಿದ್ದರೆ ಸಂಬಳದಾರರಿಗೆ ನೀಡುವ ಬೋನಸ್ ಗಳಿಗೂ ಕತ್ತರಿ ಹಾಕುವ ಸಾಧ್ಯತೆಯಿದೆ ಎಂದು ಸಿಇಒ ಇಂದ್ರ ನೂಯಿ ಹೇಳಿದ್ದಾರೆ.












Click it and Unblock the Notifications