ಅತ್ಯಾಚಾರಕ್ಕೆ ಯತ್ನ, ಮಾವನ ಶಿಶ್ನ ಕತ್ತರಿಸಿದ ಸೊಸೆ

ಪೂರ್ವ ಅಫ್ಘಾನಿಸ್ತಾನ ಘಜ್ನಿ ಪ್ರಾಂತ್ಯದ ಖಾಸಗಿ ಆಸ್ಪತ್ರೆಯಲ್ಲಿದ್ದ ರೋಗಿಯೊಬ್ಬರನ್ನು ಇತ್ತೀಚೆಗೆ ನಮ್ಮ ಆಸ್ಪತ್ರೆಗೆ ಕರೆ ತರಲಾಯಿತು. ಅಲ್ಲಿನ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲು ಆಗದಷ್ಟು ರೋಗಿಯ ಸ್ಥಿತಿ ಉಲ್ಬಣಿಸಿತ್ತು. ಇಲ್ಲಿ ಶಿಶ್ನ ಮತ್ತೆ ಕೂಡಿಕೆಗೆ ಯತ್ನಿಸಲಾಗುತ್ತಿದೆ. ಕಸಿಮಾಡುವ ಯತ್ನ ಜಾರಿಯಲ್ಲಿದೆ ಎಂದು ಕಾಬೂಲ್ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
ಒಂದು ದಿನ ಈ ರೋಗಿ ತನ್ನ ಮಗ ಹೊರಗಡೆ ಹೋಗಿರುವ ಸಂದರ್ಭ ನೋಡಿಕೊಂಡು ತನ್ನ ಸೊಸೆ ಮೇಲೆ ಕಾಮದೃಷ್ಟಿ ಬೀರಿದ್ದಾನೆ. ಮಾವನ ಇಂಗಿತ ಅರಿತ ಸೊಸೆ ಪ್ರತಿಭಟಿಸಿದರೂ ಆತನ ಕಿರುಕುಳ ತಡೆಯಲಾಗಲಿಲ್ಲ. ಕೊನೆಗೆ ಹರಿತವಾದ ಚಾಕು ತೆಗೆದು ಆತನ ಶಿಶ್ನವನ್ನು ಕತ್ತರಿಸಿ ಹಾಕಿದ್ದಾಳೆ. ಅಸಾಧ್ಯ ನೋವಿನಿಂದ ಬಳಲುತ್ತಿದ್ದ ಈತ ನೆರೆ ಮನೆಯವರ ಸಹಾಯದಿಂದ ಆಸ್ಪತ್ರೆ ಸೇರಿದ್ದಾನೆ.
ಈ ಪ್ರಸಂಗ ನಡೆದು ಎರಡು ಮೂರು ವಾರಗಳು ಕಳೆದಿದ್ದು, ಇನ್ನೂ ಚೇತರಿಕೆ ಕಂಡಿಲ್ಲ.ಆದರೆ, ವೈದ್ಯರು ಮಾತ್ರ ಚಿಕಿತ್ಸೆ ಫಲ ನೀಡುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮ ನ್ಯೂಸ್ 24 ವಾಹಿನಿ ವರದಿ ಮಾಡಿದೆ.












Click it and Unblock the Notifications