ಪೆಟ್ರೋಲ್ ಬೆಲೆ ಏರಿಕೆ ಸದ್ಯಕ್ಕಿಲ್ಲ, ಗ್ರಾಹಕ ನಿರಾಳ

ಈ ನಿರ್ಧಾರಕ್ಕೆ ಸರಕಾರದ ಸಮ್ಮತಿ ದೊರೆತರೆ ಇಂದು ಮಧ್ಯರಾತ್ರಿಯಿಂದಲೇ ಪೆಟ್ರೋಲ್ ದರದಲ್ಲಿ ಕನಿಷ್ಠ 2 ರುಪಾಯಿಯಷ್ಟು ಏರಿಕೆಯಾಗಲಿದೆ. ತೈಲ ಕಂಪನಿಗಳು ಪ್ರತಿ ತಿಂಗಳು 1 ಮತ್ತು 16ರಂದು ಪೆಟ್ರೋಲ್ ಬೆಲೆಗಳನ್ನು ಪರಿಷ್ಕರಿಸುತ್ತವೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಜಾಸ್ತಿ ಏರುಪೇರಾಗಿರದಿದ್ದರೂ ಡಾಲರ್‌ಗೆ ಪ್ರತಿಯಾಗಿ ರುಪಾಯಿ ಬೆಲೆ ಕುಸಿತ ಕಂಡಿರುವುದು ತೈಲ ಬೆಲೆ ಏರಿಕೆಯಲ್ಲಿ ಪರ್ಯವಸಾನವಾಗುತ್ತಿದೆ. ಈ ಬೆಲೆ ಏರಿಕೆ ನೂರಕ್ಕೆ ನೂರು ಸತ್ಯ ಎಂದು ಕಂಪನಿಗಳು ಹೇಳಿವೆ.
ಬೆಲೆ ಏರಿಕೆ ಸದ್ಯಕ್ಕಿಲ್ಲ : ಇದೀಗ ಬಂದಿರುವ ಸುದ್ದಿಯ ಪ್ರಕಾರ, ತೈಲ ಕಂಪನಿಗಳೊಂದಿಗೆ ಮಾತುಕತೆ ನಡೆಸಿದ ನಂತರ ಪೆಟ್ರೋಲ್ ದರ ಏರಿಕೆಗ ಸಮ್ಮತಿ ಸೂಚಿಸದಿರಲು ಕೇಂದ್ರ ಸರಕಾರ ನಿರ್ಧರಿಸಿದೆ. ಇನ್ನೂ ಹದಿನೈದು ದಿನಗಳ ಕಾಲ ಪೆಟ್ರೋಲ್ ದರವನ್ನು ಹೆಚ್ಚಿಸದಿರಲು ಸರಕಾರ ತೀರ್ಮಾನಿಸಿದೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.












Click it and Unblock the Notifications