ಬಿಜಾಪುರದಲ್ಲಿ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ
ಬಿಜಾಪುರ,
ಜ.2: ಕಳೆದ ವರ್ಷಾಂತ್ಯ ಡಿಸೆಂಬರ್ 31ರ ರಾತ್ರಿ ಬಹಿರ್ದೆಸೆಗೆಂದು ತೆರಳಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಬೈಕ್ ಮೇಲೆ ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಬಿಜಾಪುರದಲ್ಲಿ ನಡೆದಿದೆ. ಅತ್ಯಾಚಾರಿಗಳು ಬೆದರಿಕೆ ಒಡ್ಡಿದ್ದರಿಂದ ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. id="toptextpromo">ಅರಕೆರೆ
ತಾಂಡಾಕ್ಕೆ ಸೇರಿದವರಾದ ಅತ್ಯಾಚಾರವೆಸಗಿರುವ ಯುವಕರ ಹೆಸರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹುಡುಗಿ ಬಾಯಿ ಬಿಟ್ಟಿದ್ದು, ಅವರನ್ನು ಅಶೋಕ್, ಶಫೀಕ್ ಎಂದು ಇಬ್ಬರ ಹೆಸರನ್ನು ಗುರುತಿಸಿದ್ದಾಳೆ. ಇನ್ನೊಬ್ಬನ ಹೆಸರನ್ನು ಆಕೆ ಹೇಳಿಲ್ಲ. id='are-slot-1' class='oiad oi-axt oiadv'> id='top-searched-articles'>ಆ
ಯುವಕರ ಕುಟುಂಬದವರು ಪೊಲೀಸರಿಗೆ ನೀಡಿರುವ ದೂರು ಹಿಂತೆಗೆದುಕೊಳ್ಳಬೇಕೆಂದು ಅಪ್ರಾಪ್ತ ಬಾಲಕಿಯ ತಾಯಿಗೆ ಬೆದರಿಕೆ ಒಡ್ಡಿದ್ದಾರೆ. ಈ ಕುರಿತಾಗಿ ಬಾಲಕಿಯ ತಾಯಿ ಶ್ಯಾಮಾಬಾಯಿ ಗ್ರಾಮೀಣ ಪೊಲೀಸರಿಗೆ ದೂರು ನೀಡಿದ್ದಾರೆ. ಅತ್ಯಾಚಾರ ಎಸಗಿರುವ ಯುವಕರು ತಲೆ ಮರೆಸಿಕೊಂಡಿದ್ದು, ಅವರನ್ನು ಹಿಡಿಯಲು ಗ್ರಾಮೀಣ ಪೊಲೀಸರು ಬಲೆಬೀಸಿದ್ದಾರೆ.











Click it and Unblock the Notifications