ಐಎಸ್ಓ ಪಡೆದ ಮೊದಲ ಗುಡಿ ಮಲೆ ಮಹದೇಶ್ವರ
ಚಾಮರಾಜನಗರ,
ಜ. 2 : ಕಾಡುಗಳ್ಳ ವೀರಪ್ಪನ್ ಅಡಗುತಾಣವಾಗಿದ್ದ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ತಪ್ಪಲಲ್ಲಿರುವ ಮಲೆಮಹದೇಶ್ವರ ದೇವಸ್ಥಾನಕ್ಕೆ ಅಂತಾರಾಷ್ಟ್ರೀಯ ಸ್ಟಾಂಡರ್ಡ್ ಆರ್ಗನೈಸೇಷನ್(ಐಎಸ್ಓ)ನ ಪ್ರಶಸ್ತಿ ಪತ್ರ ದೊರೆತಿದೆ. id="toptextpromo">ಈ
ಐಎಸ್ಓ ಪ್ರಶಸ್ತಿಪತ್ರ ಪಡೆದಿರುವ ಮೊಟ್ಟಮೊದಲ ಭಾರತದ ದೇವಸ್ಥಾನ ಮಲೆಮಹದೇಶ್ವರ ಬೆಟ್ಟದಲ್ಲಿರುವ ದೇವಸ್ಥಾನವಾಗಿದೆ. ದೇವಸ್ಥಾನದ ಅಚ್ಚುಕಟ್ಟಾದ ಆಡಳಿತ, ದಾಖಲೆಗಳು, ನೀಡುತ್ತಿರುವ ಸೇವೆ, ಸ್ವಚ್ಛತೆ ಮುಂತಾದ ಗುಣಮಟ್ಟವನ್ನು ಪರಿಗಣಿಸಿ ಈ ಪ್ರಶಸ್ತಿಪತ್ರ ನೀಡಲಾಗಿದೆ. id='are-slot-1' class='oiad oi-axt oiadv'> id='top-searched-articles'>ದೇವಸ್ಥಾನಗಳು
ಇಂದು ಅರಾಜಕತೆಯ ಗೂಡಾಗಿವೆ. ಸೇವಾಮಟ್ಟ ಅಲ್ಲಿಲ್ಲಿ ಕುಸಿಯುತ್ತಿದೆ ಎಂಬ ಮಾತುಗಳೂ ಕೇಳಿಬರುತ್ತಿರುತ್ತವೆ. ಇಂಥ ಸಂದರ್ಭದಲ್ಲಿ ಮಲೆಮಹದೇಶ್ವರ ದೇವಸ್ಥಾನಕ್ಕೆ ಐಎಸ್ಓ ಪ್ರಶಸ್ತಿಪತ್ರ ದೊರೆತಿದೆ. ಸ್ವಿಟ್ಜರ್‌ಲೆಂಡ್‌ನ ಜಿನೀವಾದಲ್ಲಿ ಇರುವ ಐಎಸ್ಓ ಸಂಸ್ಥೆ ಆಯಾ ಸಂಸ್ಥೆಯ ಗುಣಮಟ್ಟವನ್ನು ತಾಳೆನೋಡಿ ಸರ್ಟಿಫಿಕೇಟನ್ನು ನೀಡುತ್ತದೆ. ಐಎಸ್ಓ ಸಂಸ್ಥೆಯ ನೆಟ್ವರ್ಕ್‌ನಲ್ಲಿ 163 ರಾಷ್ಟ್ರಗಳಿವೆ.











Click it and Unblock the Notifications