ಬೆನಜೀರ್ ಭುಟ್ಟೋ ಮಗನ ಪ್ರಜಾಪ್ರಭುತ್ವ ಕನಸು
ಇಸ್ಲಾಮಾಬಾದ್,
ಡಿ.29 : ಶಾಂತಿಯುತ ಹಾಗೂ ಪ್ರಗತಿಶೀಲ ಪಾಕಿಸ್ತಾನ ನಿರ್ಮಾಣಕ್ಕಾಗಿ ನನ್ನ ತಾಯಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ನನ್ನ ತಾಯಿಯ ಕನಸನ್ನು ನಾನು ನನಸುಗೊಳಿಸುತ್ತೇನೆ ಎಂದು ಮಾಜಿ ಪ್ರಧಾನಿ ದಿವಂಗತ ಬೆನಜಿರ್ ಭುಟ್ಟೊ ಅವರ ಮಗ, ಆಡಳಿತಾರೂಢ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಮುಖ್ಯಸ್ಥ ಬಿಲಾವಲ್ ಭುಟ್ಟೊ ಜರ್ದಾರಿ ಹೇಳಿದ್ದಾರೆ. id="toptextpromo">ಆತ್ಮಹತ್ಯಾ
ದಾಳಿಯಲ್ಲಿ ಬೆನಜಿರ್ ಭುಟ್ಟೊ ಅವರು ಮೃತಪಟ್ಟು ನಾಲ್ಕು ವರ್ಷಗಳು ಸಂದ ಸಂದರ್ಭದಲ್ಲಿ ಪತ್ರಿಕೆಯೊಂದಕ್ಕೆ ಬರೆದಿರುವ ಲೇಖನದಲ್ಲಿ ಬಿಲಾವಲ್ ಈ ರೀತಿ ಹೇಳಿಕೆ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>'ನಾವು
ಯಾವುದೇ ಸಂಘಟನೆಗಳಿಗೆ ತಲೆಬಾಗದೆ ಪ್ರಜಾಪ್ರಭುತ್ವ ಪರ ಪಾಕಿಸ್ತಾನ ನಿರ್ಮಾಣಕ್ಕೆ ಬದ್ಧರಾಗಿರಬೇಕು', ಉಗ್ರಗಾಮಿಗಳನ್ನು ಹತ್ತಿಕ್ಕಿ ಶಾಂತಿ, ನೆಮ್ಮದಿಯ ತಾಣವಾಗಿ ಪಾಕಿಸ್ತಾನವನ್ನು ಮಾಡಬೇಕು ಎಂದು ಬಿಲಾವಲ್ ಹೇಳಿದ್ದಾರೆ.











Click it and Unblock the Notifications