ಪೊದೆ ಮರೆಯಲ್ಲಿ ಚುಂಬನ: ವಿದ್ಯಾರ್ಥಿಗೆ ಬಿತ್ತು ಧರ್ಮದೇಟು

ಸದರಿ ವಿದ್ಯಾರ್ಥಿ ಜೋಡಿ, ಕಳೆದ ಶನಿವಾರ ಕಾಲೇಜು ಬಳಿಯಿರುವ ಪೊದೆ ಮರೆಯಲ್ಲಿ ಸೇರಿಕೊಂಡು ಚುಂಬಿಸುತ್ತಿದ್ದರು. ಇದನ್ನು ಕದ್ದು ನೋಡಿದ ಇತರೆ ವಿದ್ಯಾರ್ಥಿಗಳು, ವಿಷಯವನ್ನು ಸ್ಥಳೀಯರಿಗೆ ಕಿವಿಗೆ ಹಾಕಿದ್ದಾರೆ. ಈ ಮಧ್ಯೆ, ಇದರ ಸುಳಿವರಿತ ಜೋಡಿ, ಸ್ಥಳೀಯರು ಅಲ್ಲಿಗೆ ಬರುವಷ್ಟರಲ್ಲಿ ಪರಾರಿಯಾಗಿದ್ದರು.
ಆದರೆ ಪಟ್ಟು ಬಿಡದ ಸ್ಥಳೀಯರು, ಮಾರನೆಯ ದಿನ 'ಕಿಸ್ಸಿಂಗ್ ಹೀರೊ' ವಿದ್ಯಾರ್ಥಿ ಕಾಲೇಜಿಗೆ ಬರುವುದನ್ನೇ ಕಾಯುತ್ತಿದ್ದರು. ಇಲ್ಲಿನ ಕುಂಬ್ರ ಜಂಕ್ಷನ್ ಬಳಿ ಬರುತ್ತಿದ್ದಂತೆ ಅವನಿಗೆ ಧರ್ಮದೇಟು ನೀಡಿದ್ದಾರೆ. ಈತನಿಗೆ ಆ ವಿದ್ಯಾರ್ಥಿನಿಯನ್ನು ಪರಿಚಯ ಮಾಡಿಕೊಟ್ಟಿದ್ದ ಬ್ರೋಕರ್ ವಿದ್ಯಾರ್ಥಿಗೂ ಧರ್ಮದೇಟು ಬಿದ್ದಿದೆ.
ಏಟು ತಿಂದ ವಿದ್ಯಾರ್ಥಿಗಳು ಅಲ್ಲಿಂದ ಕಾಲ್ಕಿತ್ತವರು ಕಾಲೇಜು ಸಮೀಪದಲ್ಲೆಲ್ಲೊ ಕಾಣಿಸಿಕೊಂಡಿಲ್ಲ. ಈ ಜೊಡಿಯ ಕಿಸ್ಸಿಂಗ್ ಪ್ರಕರಣ ವಿದ್ಯಾರ್ಥಿನಿಯ ಮನೆಯವರಿಗೂ ಗೊತ್ತಾಗಿ ಅವರು ತಮ್ಮ ಮಗಳನ್ನು ಕಾಲೇಜಿಗೆ ಕಳುಹಿಸುವುದನ್ನು ನಿಲ್ಲಿಸಿದ್ದಾರೆ.












Click it and Unblock the Notifications