ರಾಗಿಗುಡ್ಡದ ಎದುರು ಮೈಕೊ ಉದ್ಯೋಗಿ, ರೌಡಿ ಷೀಟರ್ ರವಿ ಭೀಕರ ಹತ್ಯೆ
ಬೆಂಗಳೂರು,
ಡಿ. 29: ನಗರದಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಇತ್ತ ಪೊಲೀಸರು ಅನೇಕ ರೌಡಿ ಷೀಟರುಗಳ ಮನೆಗಳನ್ನು ಶೋಧಿಸುತ್ತಿದ್ದರೆ ಅತ್ತ ಸದ್ದಿಲ್ಲದೆ ರೌಡಿ ಷೀಟರ್ ಒಬ್ಬನ ಹತ್ಯೆಯಾಗಿದೆ. ನಗರದ ದಕ್ಷಿಣ ಭಾಗದಲ್ಲಿ ರಾಗಿಗುಡ್ಡ ಸಮೀಪ ಪೈ ಕಂಫರ್ಟ್ಸ್ ಬಳಿ ಮೈಕೋ ಉದ್ಯೋಗಿ, 37 ವರ್ಷದ ರವಿ ಎಂಬಾತನನ್ನು ಬೆಳಗ್ಗೆ ಸುಮಾರು 7 ಗಂಟೆ ವೇಳೆ ಆತನ ಮನೆಯೆದುರೇ ಭೀಕರವಾಗಿ ಹತ್ಯೆ ಮಾಡಲಾಗಿದೆ. id="toptextpromo">ರಾತ್ರಿ
ಪಾಳಿ ಮುಗಿಸಿಕೊಂಡು ಮನೆಗೆ ಮರಳಿದ ರವಿ ಇನ್ನೇನು ಮನೆಯ ಗೇಟು ತೆಗೆದು ಒಳಹೋಗಬೇಕು ಎನ್ನುವಾಗ ಕಾದುಕುಳಿತಿದ್ದ ಹಂತಕ ಪಡೆ ಅವರ ಮೇಲೆ ಮುಗಿಬಿದ್ದಿದೆ. ಏಕಾಏಕಿ ದಾಳಿಯನ್ನು ರವಿ ಅವರ ಪತ್ನಿ ತಡೆಯಲು ಯತ್ನಿಸಿದರೂ ಅದಕ್ಕೆ ಅವಕಾಶವೇ ಕೊಡದೆ 7-8 ಮಂದಿ ಅಪರಿಚಿತರ ತಂಡವು ಯದ್ವಾತದ್ವಾ ಕೊಚ್ಚಿ ಕೊಲೆ ಮಾಡಿದೆ. ರವಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ರವಿ ಹತ್ಯೆಯಲ್ಲಿ ಅಲ್ಯುಮಿನಿಯಂ ಬಾಬು ಕೈವಾಡವಿದೆ ಎನ್ನಲಾಗಿದೆ. id='are-slot-1' class='oiad oi-axt oiadv'> id='top-searched-articles'>ಪೊಲೀಸ್
ಮೂಲಗಳ ಪ್ರಕಾರ ರವಿ ರೌಡಿ ಷೀಟರ್ ಆಗಿದ್ದು, ಈ ಹಿಂದೆ ಒಂದು ಕೊಲೆ ಪ್ರಕರಣದಲ್ಲೂ ಭಾಗಿಯಾಗಿದ್ದ. ಜೆಪಿ ನಗರ ಪೊಲೀಸರು ಮತ್ತು ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಹಂತಕರ ಬಂಧನಕ್ಕೆ ಪೊಲೀಸರು ವ್ಯಾಪಕ ಶೋಧ ನಡೆಸಿದ್ದಾರೆ. ಹಳೆಯ ವೈಷಮ್ಯವೇ ಹತ್ಯೆಗೆ ಕಾರಣ ಎನ್ನಲಾಗಿದೆ.











Click it and Unblock the Notifications