ಸಮಾಧಿ ಪೂಜೆಗೆಬಂದ ಕುಮಾರ್ ಬಂಗಾರಪ್ಪಗೆ ತಡೆ

ಪಟ್ಟಣದ ಸರಕಾರಿ ಕಾಲೇಜಿನ ಪಕ್ಕದಲ್ಲಿರುವ ಮಧು ಬಂಗಾರಪ್ಪ ಒಡೆತನದ ಜಾಗದಲ್ಲಿ ಬಂಗಾರಪ್ಪ ಸಮಾಧಿಗೆ ಕುಮಾರ್ ತನ್ನ ಪತ್ನಿ, ಮಕ್ಕಳ ಸಮೇತ ಆಗಮಿಸಿ ಪೂಜೆ ನಡೆಸುವವರಿದ್ದರು. ಇದನ್ನು ಕಂಡ ಮಧು ಬಂಗಾರಪ್ಪ ಬೆಂಬಲಿಗರು ಅವರನ್ನು ಮಧ್ಯದಲ್ಲೇ ತಡೆಯೂಡ್ಡಿದರು.
ಈ ವಿಷಯದಲ್ಲಿ ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಬೆಂಬಲಿಗರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಕೊನೆಗೆ ಕುಮಾರ್ ಬಂಗಾರಪ್ಪ ಪೂಜಾ ವಿಧಿವಿಧಾನ ನಡೆಸಿ ಅಲ್ಲಿಂದ ನಿರ್ಗಮಿಸಿದರು.
ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಕುಮಾರ್, ನಮ್ಮಪ್ಪ ಆದರ್ಶದಿಂದ ಬಾಳಿ ಬದುಕಿದಂತವರು, ನನ್ನಿಂದ ತಪ್ಪಾಗಿದೆ ಆದರೆ ಅವರ ಪೂಜಾ ವಿಧಿವಿಧಾನ ಮಾಡಲು ತಡೆಯೊಡ್ದುವುದು ಸಂಸ್ಕಾರವಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.












Click it and Unblock the Notifications