ವಿದೇಶಿ ಶಿಕ್ಷಣ ಪಂಡಿತರು ಕರ್ನಾಟಕಕ್ಕೊಮ್ಮೆ ಬರಲಿ

ಅವರು ಅನೇಕ ಅಧ್ಯಯನ, ಪ್ರಯೋಗಳ ಮೂಲಕ ಈಗ ಕಂಡುಕೊಂಡಿರುವ ಹೊಸ ಸತ್ಯವೆಂದರೆ, ಓದಿನಲ್ಲಿ ಹುಡುಗಿಯರು ಯಾವಾಗಲೂ ಮುಂದು ಎಂಬುದು. ಅದರಲ್ಲೂ ಅವರನ್ನು ಪ್ರತ್ಯೇಕವಾಗಿ ಅಧ್ಯಯನದಲ್ಲಿ ತೊಡಗಿಸಿದಾಗ ಹುಡುಗರಿಗಿಂತ ಉತ್ತಮ ಅಂಕ ಪಡೆಯುತ್ತಾರಂತೆ!
ಈ ಸಂಗತಿ ನಮ್ಮ ರಾಜ್ಯ, ದೇಶಗಳಲ್ಲಿ ಎಂದೋ ಸಾಬೀತಾಗಿದೆ. ಎಸ್ಸೆಸ್ಸೆಲ್ಸಿಯಲ್ಲಿ, ಪಿಯುಸಿಯಲ್ಲಿ ನಮ್ಮ ಕರ್ನಾಟಕದ ಹುಡುಗಿಯರು ಯಾವತ್ತಿದ್ದರೂ ಮುಂದು. 'ಎಂದಿನಂತೆ ಹುಡುಗಿಯರ ಮೇಲುಗೈ' ಎಂಬ ಶೀರ್ಷಿಕೆ ಪ್ರತಿವರ್ಷ ಫಲಿತಾಂಶ ಪ್ರಕಟವಾದಾಗ ಪ್ರಕಟವಾಗುವುದು ಪಾಪ ವಿದೇಶಿ ವಿಶ್ವವಿದ್ಯಾಲಯಗಳ ಪಂಡಿತರಿಗೆ ಗೊತ್ತಿಲ್ಲ.
ಎಸೆಕ್ಸ್ ಎಂಬ ವಿಶ್ವವಿದ್ಯಾಲಯದಲ್ಲಿ ಇಂತಹದೊಂದು ಅಧ್ಯಯನ ಕೈಗೊಂಡರಂತೆ. ಹುಡುಗರದೊಂದು ತಂಡ, ಹುಡುಗಿಯರದೊಂದು ತಂಡ ಮತ್ತು ಇಬ್ಬರ ಮಿಶ್ರಣವಿರುವ ತಂಡ. ಜೊತೆಯಲಿ ಹುಡುಗಿಯರು ಇದ್ದರೂ ಅಷ್ಟೇ, ಇಲ್ಲದಿದ್ದರೂ ಅಷ್ಟೇ, ಹುಡುಗರ ಮೇಲೆ ಯಾವುದೇ ಪರಿಣಾಮ ಬೀರಿರಲಿಲ್ಲ. ಆದರೆ, ಹುಡುಗಿಯರು ಮಾತ್ರ ಎಲ್ಲರನ್ನೂ ಹಿಂದಿಕ್ಕಿ ಫಸ್ಟ್ ಕ್ಲಾಸಲ್ಲಿ ಪಾಸು ಮಾಡಿದರಂತೆ.












Click it and Unblock the Notifications