ಗೂಗಲ್ ಜೊತೆ ಕೈಜೋಡಿಸಿದ ರಾಹುಲ್ ಗೆ ಭರ್ಜರಿ ಲಾಭ

ಸುಮಾರು 12.5 ಲಕ್ಷ ಯುವ ಕಾಂಗ್ರೆಸ್ ಸದಸ್ಯರನ್ನು ಹೊಂದಿರುವ ರಾಹುಲ್, ಉತ್ತರ ಪ್ರದೇಶದ ಪ್ರತಿ ಬೂತ್ ನಿರ್ವಹಣೆ 10 ಜನ ಯುವ ಕಾಂಗ್ರೆಸ್ಸಿಗರನ್ನು ನೇಮಿಸಲು ಯೋಜಿಸಿದ್ದಾರೆ.
ಗೂಗಲ್ ಜೊತೆ ಒಪ್ಪಂದದಿಂದ ರಿಯಲ್ ಟೈಮ್ ನಲ್ಲಿ ತ್ವರಿತವಾಗಿ ಪ್ರತಿಕ್ರಿಯೆಗಳು ಪಡೆಯಲು ಸಾಧ್ಯವಾಗುತ್ತಿದೆ. ಚುನಾವಣಾ ಪ್ರಚಾರದಲ್ಲೂ ಸಹಕಾರಿಯಾಗಿದೆ ಎಂದು ಯುವ ಕಾಂಗ್ರೆಸ್ಸಿಗ ವೀರೇಂದ್ರ ರಾಥೋರ್ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲೇ ಪಶ್ಚಿಮ ಭಾಗದಲ್ಲಿ 3.5ಲಕ್ಷ ಸದಸ್ಯರು, ಪೂರ್ವ ಭಾಗದಲ್ಲಿ 4 ಲಕ್ಷ ಜನ, ಬುಂದೇಲ್ ಖಂಡ್ ನಲ್ಲಿ 2 ಲಕ್ಷ ಜನರನ್ನು ಆಕರ್ಷಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.
ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಆರಂಭಿಸಿದ ರಾಹುಲ್ ಗಾಂಧಿ, ಈಗ ದೇಶದ ಅತಿದೊಡ್ಡ ರಾಜಕೀಯ ಸಂಸ್ಥೆಯಾಗಿ ಯುವ ಕಾಂಗ್ರೆಸ್ ರೂಪಿಸಿದ್ದಾರೆ. ಯುವ ಕಾಂಗ್ರೆಸ್ಸಿಗರ ಚಟುವಟಿಕೆಗಳ ಮೇಲೆ ರಾಹುಲ್ ಹಾಗೂ ಹಿರಿಯ ನಾಯಕರು ನಿಗಾ ಇಡಲು ಕೂಡಾ ಗೂಗಲ್ ಸಹಕಾರಿಯಾಗಿದೆ.












Click it and Unblock the Notifications