ಹೆಸರು ರಾಮ ಅವತಾರ, ಮಾಡಿದ್ದು ಶಿಷ್ಯೆ ಮೇಲೆ ರೇಪ್

ಅಂಬೇಡ್ಕರ್ ನಗರದ ಈತನ ಮನೆಗೆ ಮನೆ ಪಾಠಕ್ಕೆ ಬರುತ್ತಿದ್ದ 20 ವರ್ಷದ ಯುವತಿ ಮೇಲೆ ಈತ ತಿಂಗಳ ಹಿಂದೆಯೇ ಅತ್ಯಾಚಾರ ಎಸೆಗಿ ಎಂಎಂಸ್ ಮಾಡಿಟ್ಟುಕೊಂಡಿದ್ದ. ಇದ್ದಕ್ಕಿದ್ದಂತೆ ಹುಡುಗಿಗೆ ಧೈರ್ಯ ಬಂದು ಪೊಲೀಸರಿಗೆ ಸುದ್ದಿ ಮುಟ್ಟಿಸುವುದಾಗಿ ಹೇಳಿದ್ದಾಳೆ.
ಆದರೆ, ತನ್ನ ಹಳೆ ವಿದ್ಯಾರ್ಥಿನಿ ಜೊತೆ ಸಂಗವನ್ನು ತಪ್ಪಿಸಿಕೊಳ್ಳಲು ಬಯಸದ ಶಿಕ್ಷಕ, ಆಕೆಗೆ ಎಂಎಂಎಸ್ ತೋರಿಸಿ ಹೆದರಿಸುತ್ತಾನೆ. ನನ್ನ ಜೊತೆ ನಿರಂತರ ಸಂಪರ್ಕದಲ್ಲಿರು ಯಾರಿಗೂ ಹೆದರಬೇಡ. ನಮ್ಮ ಸಂಬಂಧ ಗುಟ್ಟಾಗಿ ಇಟ್ಟಿರುತ್ತೇನೆ ಎಂದು ರಾಮ್ ಹೇಳಿದ್ದಾನೆ.
ಆದರೆ, ಆತನ ಕಾಟ ತಡೆಯಲಾರದೆ ಎರಡು ದಿನಗಳ ಹಿಂದೆ ಪೊಲೀಸರ ಮೊರೆ ಹೊಕ್ಕಿದ್ದಾಳೆ. ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಆಕೆ ಮೇಲೆ ಅತ್ಯಾಚಾರ ನಡೆದಿರುವುದು ನಿಜ ಎಂಬುದನ್ನು ಪೊಲೀಸರು ಖಾತ್ರಿ ಮಾಡಿಕೊಂಡಿದ್ದಾರೆ.
ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ್ದ ಶಿಕ್ಷಕ ರಾಮ್ ಅವತಾರ್ ಕೊನೆಗೂ ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟಿದ್ದಾನೆ. ಆದರೆ, ಸುಮಾರು ವರ್ಷಗಳಿಂದ ಹಿಂಸೆ ಅನುಭವಿಸಿಯೂ ರಕ್ಷಣೆ ಬೇಡದ ಹುಡುಗಿಗೆ ಪೊಲೀಸರು ಸರಿಯಾಗಿ ಬುದ್ಧಿ ಹೇಳಿ ಕಳಿಸಿದ್ದಾರೆ.












Click it and Unblock the Notifications