ಬೆಂಗಳೂರಿನಲ್ಲಿ ಗ್ಯಾಂಗ್ ರೇಪ್: ಯುವತಿ ಯಾಮಾರಿದ್ದು ಹೇಗೆ?

bangalore-girl-gang-raped-how-it-happened
ಬೆಂಗಳೂರು, ಡಿ.27: ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ವಿಲ್ಸನ್‌ಗಾರ್ಡನ್‌ ಚರ್ಚ್‌ನಲ್ಲಿ ಯುವ ಪ್ರೇಮಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ನಂತರ ಯುವತಿಯು ಹೇಗೂ ಪ್ರಿಯಕರ ಯಶ್ ರಾಜ್ ಬಳಿ ಬೈಕ್ ಇತ್ತಲ್ಲ ಹಲಸೂರಿನಲ್ಲಿರುವ ತನ್ನ ಮನೆಗೆ ಡ್ರಾಪ್ ಕೊಡು ಎಂದಿದ್ದಾಳೆ.

ಸರಿ ಆ ಯುವಕನೋ ಈಗಾಗಲೇ ರಾತ್ರಿಯಾಗಿದೆ. ಬೇಗ ಮನೆ ಸೇರೋಣ ಎಂದು ಅಶೋಕ ನಗರ ಪೊಲೀಸ್‌ ಠಾಣಾ ವ್ಯಾಪ್ತಿಗೆ ಬರುವ ಲ್ಯಾಂಗ್ ಫೋರ್ಡ್ ಟೌನ್ ಬರ್ಲಿ ಸ್ಟ್ರೀಟ್‌ ಬಳಿ ಸಮಾಧಿಯನ್ನು ಬಳಸಿಕೊಂಡು ಶಾರ್ಟ್ ಕಟ್ ದಾರಿಯಲ್ಲಿ ಸಾಗಿದ್ದಾರೆ. ಅದೇ ಯಡವಟ್ಟಾಗಿದೆ.

ಸ್ಡ್ರಥಳೀಯರ ಪ್ಗ್ರಕಾರ ಅಡಿಕ್ಟ್, ಜೂಜುಕೋರರು, ಪುಂಡ ಪೋಕರಿಗಳಿಗೆ ಈ ಸಮಾಧಿ ಸ್ಥಳ ಅತ್ಯಂತ ಪ್ರಶಸ್ತವಾಗಿದ್ದು, ಇಲ್ಲಿ ಆಗಾಗ ದುಷ್ಕೃತ್ಯಗಳು ನಡೆಯುತ್ತಲೇ ಇರುತ್ತವೆ.

ಬಾಧಿತ ಯುವತಿ ಬಿಕಾಂ ವಿದ್ಯಾರ್ಥಿನಿ. ಭಾನುವಾರ ರಾತ್ರಿ 7.40ರಿಂದ 9.50 ರವರೆಗೆ ಆಂಥೋಣಿ ರಾಜ್ ಮತ್ತು ಅವನ ತಂಡ ಭೀಬತ್ಸವಾಗಿ ಯುವತಿಯ ಬಾಳಿನೊಂದಿಗೆ ಆಟವಾಡಿದ್ದಾರೆ. ಆರೋಪಿಗಳೆಲ್ಲ ವಿನಾಯಕ ನಗರ ನಿವಾಸಿಗಳು.

ಮೊದಲು ಬೈಕ್ ಅಡ್ಡಗಟ್ಟಿದ ತಂಡ ಯಶ್ ರಾಜ್ ನನ್ನು ಬೈಕಿನಿಂದ ಕೆಳಗೆ ತಳ್ಳಿ, ಗಾಡಿಯ ಕೀ ಕಿತ್ತುಕೊಂಡಿದ್ದಾರೆ. ನಂತರ ಸಾವಕಾಶವಾಗಿ ಮೊದಲು ಮೊಬೈಲ್ ಪೋನ್, ಪಿಯಾನೊ, ಗೋಲ್ಡ್ ಚೈನ್ ಮತ್ತಿತರ ವಸ್ತುಗಳನ್ನು ಅಪಹರಿಸಿದ್ದಾರೆ. ಆನಂತರ ಯುವಕನನ್ನು ಕೈಗಳನ್ನು ಕಟ್ಟಿ ಹಾಕಿ, ಯುವತಿಯನ್ನು ಸಮಾಧಿಯೊಳಕ್ಕೆ ಎಳೆದೊಯ್ದ ಕಾಮಾಂಧರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ.

ಪ್ರಿಯಕರ ಯಶ್ ರಾಜ್ ಜೋರಾಗಿ ಕಿರುಚಿಕೊಂಡು ದಾರಿಯಲ್ಲಿ ಹೋಗುತ್ತಿದ್ದವರ ನೆರವು ಪಡೆದು ಹಗ್ಗ ಬಿಚ್ಚಿಸಿಕೊಂಡು, ಪೊಲೀಸರನ್ನು ಸಂಪರ್ಕಿಸಿದ್ದಾನೆ. ಯುವತಿ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+