ಅಂಬಾನಿ ಸೋದರರ ಮಿಲನ, ರಿಲಯನ್ಸ್ ಷೇರು ಜಿಗಿತ

Mukesh and Anil Ambani
ಮುಂಬೈ, ಡಿ.27: ಷೇರುಪೇಟೆಯಲ್ಲಿ ಏರಿಳಿತದ ನಡುವೆ ಮಂಗಳವಾರ(ಡಿ.27) ಅಂಬಾನಿ ಸೋದರರ ಕಂಪನಿಗಳ ಷೇರು ಭಾರಿ ಜಿಗಿತ ಕಂಡಿದೆ. ಹಲವು ವರ್ಷಗಳ ನಂತರ ಅಂಬಾನಿ ಕುಟುಂಬ ಒಂದೆಡೆ ಸೇರುತ್ತಿರುವುದು ಷೇರುಪೇಟೆ ಮೇಲೆ ಪರಿಣಾಮ ಬೀರಿದೆ.

ಕೋಟ್ಯಾಧಿಪತಿ ಸೋದರರು ಸುಮಾರು 7 ವರ್ಷಗಳ ನಂತರ ತಮ್ಮ ಹುಟ್ಟೂರಲ್ಲಿ ಸೇರುತ್ತಿದ್ದಾರೆ. ತಂದೆ ಧೀರೂಬಾಯಿ ಅಂಬಾನಿ ಅವರ 80ನೇ ಜನ್ಮದಿನ ಮಹೋತ್ಸವ ಆಚರಣೆಗೆ ಈ ಇಬ್ಬರು ಉದ್ಯಮಿಗಳು ಖುಷಿಯಿಂದ ಪಾಲ್ಗೊಳ್ಳುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಸಂಸ್ಥೆ 768 ರೂ ನಷ್ಟು ಅಥವಾ ಶೇ.1.05ರಷ್ಟು ಏರಿಕೆ ಕಂಡಿದೆ. ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಕಮ್ಯೂನಿಕೇಷನ್ ಸಂಸ್ಥೆ ಶೇ.3.60ರಷ್ಟು ಜಿಗಿತ ಕಂಡಿದೆ.

ರಿಲಯನ್ಸ್ ಇನಫ್ರಾಸ್ಟಕ್ಚರ್ ಶೇ.1.93ರಷ್ಟು, ರಿಲಯನ್ಸ್ ಮೀಡಿಯಾ ಶೇ.2.47ರಷ್ಟು, RIIL ಶೇ.2.66ರಷ್ಟು ಹಾಗೂ ರಿಲಯನ್ಸ್ ಕ್ಯಾಪಿಟಲ್ ಶೇ. 2.17ರಷ್ಟು ಏರಿಕೆ ಕಂಡಿದೆ.

ಇಬ್ಬರು ಸೋದರರ ನಡುವೆ ಯಾವುದೇ ವೈಮನಸ್ಯವಿಲ್ಲ. ಇಬ್ಬರು ಒಟ್ಟಿಗೆ ಅಂಬಾನಿ ಅವರ ಜನ್ಮದಿನಾಚರಣೆಯಲ್ಲಿ ತೊಡಗಿದ್ದಾರೆ ಎಂದು ಅಂಬಾನಿ ಸೋದರರ ತಾಯಿ ಕೋಕಿಲಬೆನ್ ಅಂಬಾನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಂಬಾನಿ ಸೋದರರು ಕೈ ಜೋಡಿಸಿ ಮುನ್ನೆಡದರೆ ಕೈಗಾರಿಕೆ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಂಬಾನಿ ಕುಟುಂಬ ಹಾಗೂ ಷೇರುದಾರರಿಗೆ ಮಂಗಳವಾರ ಮಂಗಳಕರವಾಗಿ ಪರಣಮಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+