ಅಗ್ರಮಾನ್ಯ ಸಾಲಗಾರ ಮಲ್ಯ ಸಂಗ ತೊರೆದ ಗಗನಸಖಿಯರು
ಬೆಂಗಳೂರು,
ಡಿ.27: ಕ್ರಿಸ್ ಮಸ್ ಕೊಡುಗೆಯಾಗಿ ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ಏರ್ ಲೈನ್ಸ್ ಗೆ ಸಂಸ್ಥೆಯ 36 ಗಗನಸಖಿಯರು ಗುಡ್ ಬೈ ಹೇಳಿ ಸರಕಾರಿ ಸ್ವಾಮ್ಯದ ಇಂಡಿಯನ್ ಏರ್ ಲೈನ್ಸ್ ಅನ್ನು ಅಪ್ಪಿಕೊಂಡಿದ್ದಾರೆ. ಇದರಿಂದ ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಿಜಯ್ ಮಲ್ಯಗೆ ಇನ್ನೊಂದು ಹೊಡೆತ ಬಿದ್ದಂತಾಗಿದೆ. id="toptextpromo">ಕಿಂಗ್
ಫಿಷರ್ ಸಂಸ್ಥೆ ಅರ್ಥಿಕ ಬಿಕ್ಕಟ್ಟು ಅನುಭವಿಸುತ್ತಿರುದನ್ನ ಮನಗಂಡ ಗಗನಸಖಿಯರು ತಮ್ಮ ಭವಿಷ್ಯದ ದೃಷ್ಟಿಯಿಂದ ಕಿಂಗ್ ಫಿಷರ್ ತೊರೆದಿದ್ದಾರೆ ಎನ್ನಲಾಗಿದೆ. ಕಿಂಗ್ ಫಿಷರ್ ತೊರೆದ ಕೆಲವು ಗಗನಸಖಿಯರು ಸರಕಾರಿ ಕೆಲಸದ ಕಡೆಗೆ ಮುಖ ಮಾಡಿದರೆ ಇನ್ನು ಕೆಲವರು ಏರ್ ಇಂಡಿಯಾ ಕಡೆ ಮುಖ ಮಾಡಿದ್ದಾರೆ ಎಂದು ತಿಳಿದುಬಂದಿದೆ. id='are-slot-1' class='oiad oi-axt oiadv'> id='top-searched-articles'>ಅಗ್ರಮಾನ್ಯ
ಸಾಲಗಾರ ಕಿಂಗ್ ಫಿಷರ್ ಏರ್ ಲೈನ್ಸ್ ಮಾಲೀಕ, ಹೆಂಡದ ದೊರೆ ವಿಜಯ್ ಮಲ್ಯ ಇತ್ತೀಚೆಗೆ ಸೇವಾ ತೆರಿಗೆ ಬಾಬತ್ತಿನಲ್ಲಿ ಕಿಂಗ್ ಫಿಷರ್ ಏರ್ ಲೈನ್ಸ್ ಸುಮಾರು 70 ಕೋಟಿ ರುಪಾಯಿ ಬಾಕಿ ಉಳಿಸಿಕೊಂಡಿತ್ತು. ಜತೆಗೆ, ತಮ್ಮ ನೌಕರರ ಸಂಬಳದಲ್ಲಿ TDS ಬಾಬತ್ತಿನಲ್ಲಿ 153 ಕೋಟಿ ರುಪಾಯಿಯನ್ನೂ ಇಲಾಖೆಗೆ ಇನ್ನೂ ಪಾವತಿಸಿಲ್ಲ.











Click it and Unblock the Notifications