ಆರೋಪ ಮುಕ್ತರಾಗುವವರೆಗೂ ಸಿಎಂ ಆಗುವ ಚಾನ್ಸ್ ಇಲ್ಲ
ಬೆಂಗಳೂರು,
ಡಿ. 25: ಬಿಜೆಪಿಯ ಕಮಲದಡಿ ನೀರು ಕದಡಿದ್ದು, ರಾಡಿ ಎಬ್ಬಿಸಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ಈಶ್ವರಪ್ಪ ಅವರು 'ಯಡಿಯೂರಪ್ಪ ಹೇಳಿದಂತೆ ಅವರದೇ ನಾಯಕತ್ವದಲ್ಲಿ ಸಾಗಬೇಕು ಎಂದೇನೂ ಇಲ್ಲ. ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ಮುನ್ನಡೆಯಲಿದೆ' ಎಂದು ಖಡಕ್ ಉತ್ತರ ನೀಡಿದ್ದಾರೆ. id="toptextpromo">'ಯಡಿಯೂರಪ್ಪ
ಅವರು ಆರೋಪ ಮುಕ್ತರಾಗುವವರೆಗೂ ಸಿಎಂ ಆಗುವ ಚಾನ್ಸ್ ಇಲ್ವೇ ಇಲ್ಲ. ಸದಾನಂದ ಗೌಡರಿಗೆ ವರಿಷ್ಠರು ಅಭಯ ನೀಡಿದ್ದು, ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ' ಎಂದೂ ಈಶ್ವರಪ್ಪ ತಿರುಗೇಟು ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇದೇ
27ರಂದು ದೆಹಲಿಗೆ ನಾನೂ, ಸದಾನಂದರು ದೆಹಲಿಗೆ ತೆರಳಲಿದ್ದೇವೆ. ವರಿಷ್ಠರ ಜತೆ ನಾಯಕತ್ವವ ಗೊಂದಲ ಸೇರಿದಂತೆ ಸದ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಸಮಗ್ರ ಮಾಹಿತಿ ನಿಡಲಾಗುವುದು. ಇದೇ ವೇಳೆ, 28ರಂದು ಸದಾನಂದರು ತಮ್ಮ ಎಂಪಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಅದರೊಂದಿಗೆ ಎಲ್ಲ ಗೊಂದಲಗಳಿಗೂ ತೆರೆ ಬೀಳಲಿದೆ ಎಂದು ಈಶ್ವರಪ್ಪ ಸೂಚ್ಯವಾಗಿ ತಿಳಿಸಿದರು.











Click it and Unblock the Notifications