ಯಡಿಯೂರಪ್ಪಗೆ ಗೌಡ, ಈಶ್ವರಪ್ಪ ದಿಟ್ಟ ಉತ್ತರ
ಬೆಂಗಳೂರು,
ಡಿ. 25: ರಾಜ್ಯ ಬಿಜೆಪಿ ನಾಯಕತ್ವದ ಜೇನುಗೂಡಿಗೆ ಸರಿಯಾಗಿ ಕಲ್ಲು ಹೊಡೆದಿರುವ ಮಾ.ಮು. ಬಿಎಸ್ ಯಡಿಯೂರಪ್ಪ ವಿರುದ್ಧ ಪಕ್ಷದ ಆಯಕಟ್ಟಿನ ಸ್ಥಾನಗಳಲ್ಲಿರುವ 'ಅಧಿಕೃತ ಮುಖ್ಯಮಂತ್ರಿ' ಸದಾನಂದ ಗೌಡ ಮತ್ತು ರಾಜ್ಯ ಬಿಜೆಪಿಯ ಅಧಿನಾಯಕ ಕೆಎಸ್ ಈಶ್ವರಪ್ಪ ದಿಟ್ಟ ಉತ್ತರ ನೀಡಿದ್ದಾರೆ. ಇದರೊಂದಿಗೆ ಬಿಜೆಪಿ ಚಿಂದಿಯಾಗುವ ಎಲ್ಲ ಲಕ್ಷಣಗಳೂ ಸ್ಪಷ್ಟವಾಗಿವೆ. id="toptextpromo">'ರಾಜ್ಯ
ಬಿಜೆಪಿಯ ಪ್ರಶ್ನಾತೀತ ನಾಯಕ ನಾನೇ' ಎಂದು ಮೂರು ದಿನದಿಂದ ಜಪಿಸುತ್ತಿರುವ ಯಡಿಯೂರಪ್ಪಗೆ ಶಿರಸಿಯಲ್ಲಿ ಗೌಡ ಉತ್ತರ ನೀಡಿದ್ದಾರೆ. 'ನೋಡಿ, ಮೊನ್ನೆ ದಿಲ್ಲಿ ಭೇಟಿ ವೇಳೆ ಹೈಕಮಾಂಡ್ ನನಗೆ ಸ್ಪಷ್ಟವಾಗಿ ಹೇಳಿದೆ. ನಾನೇ ಇನ್ನು ಒಂದೂವರೆ ವರ್ಷ ರಾಜ್ಯದಲ್ಲಿ ಮುಖ್ಯಮಂತ್ರಿ' ಎಂದು ತಮಗೆ ತಾವೇ ಖಾತ್ರಿ ಪಡಿಸಿಕೊಳ್ಳುವ ಧಾಟಿಯಲ್ಲಿ ಗೌಡರು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>'ಅದೇನೋ,
ಸಂಪುಟ ವಿಸ್ತರಣೆ ಸದ್ಯಕ್ಕೆ ಆಗೊಲ್ಲ' ಎಂದು ಯಡಿಯೂರಪ್ಪ ತಮ್ಮ ಊರಲ್ಲಿ ಹೇಳಿದ್ದಾರಂತಲ್ಲ ಎಂದು ಸುದ್ದಿಗಾರರು ಕೇಳಿದ್ದೇ ತಡ. ಕೆಂಡಾಮಂಡಲರಾದ ಸದಾನಂದ ಯಾರು ಹೇಳಿದ್ದು? ಸಂಪುಟ ವಿಸ್ತರಣೆ ನನ್ನ ಪರಮಾಧಿಕಾರ. ವರಿಷ್ಠರು ಸೂಚನೆಯಂತೆ ಸದ್ಯದಲ್ಲೇ ಸಂಪುಟ ವಿಸ್ತರಣೆ ಮಾಡಿಯೇ ತೀರುತ್ತೇನೆ' ಎಂದು ಸ್ಪಷ್ಟಪಡಿಸಿದರು.











Click it and Unblock the Notifications