ಸದ್ಯ, ಬೆಂಗಳೂರಿನಲ್ಲಿ ದರ್ಶಿನಿ ಗ್ರಾಹಕ ಬಚಾವ್!

ಬೆಂಗಳೂರು ಸೇರಿದಂತೆ ದೆಹಲಿ, ಮುಂಬೈ, ಪುಣೆಯಲ್ಲಿರುವ ಸ್ಟಾರ್ ಹೊಟೇಲುಗಳು ಎಲ್ಲ ಸೇವಾ ದರಗಳನ್ನು ಶೇ.60ರಷ್ಟು ಹೆಚ್ಚಿಸಿ ಗ್ರಾಹಕರಿಗೆ ಬಿಸಿ ಮುಟ್ಟಿಸಿವೆ. ಈ ಹಬ್ಬದ ಸಂದರ್ಭದಲ್ಲಿ ಸದ್ಯಕ್ಕೆ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿಯ ಡಿನ್ನರ್‌ಗಾಗಿ ದರ್ಶಿನಿಗಳನ್ನೇ ನಂಬಿರುವ ಬಡಪಾಯಿಗಳು ಬಚಾವಾಗಿದ್ದಾರೆ.
ಶೇ.60ರಷ್ಟು ದರಗಳನ್ನು ಏರಿಸಿದ್ದಕ್ಕೆ ಬದಲಾಗಿ ದಂಪತಿಗಳಿಗೆ ಹೊಸಹೊಸ ಆಫರುಗಳ, ಕುಡಿಯುವವರಿಗೆ ವಸತಿಯ ಜೊತೆಗೆ ಬಾರ್ ಸೌಲಭ್ಯವಿರುವ ಆಮಿಷಗಳನ್ನು ಒಡ್ಡುತ್ತಿವೆ. ಮಡದಿ ಅಥವಾ ಗೆಳತಿಯೊಂದಿಗೆ ರುಚಿಕರವಾದ ಭಕ್ಷ್ಯಭೋಜ್ಯಗಳನ್ನು ತಿನ್ನುತ್ತ ಹೊಸ ವರ್ಷ ಆಚರಿಸುವವರಿಗೆ ನೂತನ ಸೌಕರ್ಯಗಳನ್ನು ಸ್ಟಾರ್ ಹೋಟೆಲುಗಳು ಒದಗಿಸುತ್ತಿವೆ.
ರೂಂ ಬಾಡಿಗೆಗಳನ್ನು 10 ಸಾವಿರದಿಂದ 25 ಸಾವಿರದವರೆಗೆ ಏರಿಸಲಾಗಿದೆ. ಭಾರತ ಆರ್ಥಿಕ ಬಿಕ್ಕಟ್ಟಿನ ಹೊಸ್ತಿಲಲ್ಲಿ ನಿಂತಿದ್ದರೂ, ಕಳೆದ ವರ್ಷಕ್ಕಿಂತ ಈ ವರ್ಷ ಶೇ.20ರಷ್ಟು ಬುಕ್ಕಿಂಗ್ ಗಳು ಹೆಚ್ಚಾಗಿವೆ ಎಂಬುದು ಹೋಟೆಲ್ ಮಾಲಿಕರ ಅಂಬೋಣ. ಚುಮುಚುಮು ಚಳಿಯಲ್ಲಿ, ಝಗಮಗಿಸುವ ಬೆಳಕಿನಲ್ಲಿ ಹೊಸವರ್ಷಕ್ಕೆ ಕಾಲಿಡಲು ಸಜ್ಜಾಗಿರುವ ಶ್ರೀಮಂತರಿಗೆ ಹೋಟೆಲುಗಳು ರತ್ನಗಂಬಳಿ ಹಾಸಿವೆ.












Click it and Unblock the Notifications