ಈಗ ಮುಖ್ಯಮಂತ್ರಿ ನರೇಂದ್ರ ಮೋದಿ ಬಗ್ಗೆ Ph.D
ಇಂದೋರ್,
ಡಿ.22: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬಗ್ಗೆ ಈಗ ಅಧ್ಯಯನ ವಿಷಯವಾಗಿದ್ದಾರೆ. ಮೋದಿಯ ಕಟ್ಟರ್ ಅಭಿಮಾನಿ ವಿದ್ಯಾರ್ಥಿಯೊಬ್ಬ 'ಗುಜರಾತಿನಲ್ಲಿ ಅಭಿವೃದ್ಧಿ ಮತ್ತು ನರೇಂದ್ರ ಮೋದಿ' ಎಂಬ ವಿಷಯವನ್ನು ತನ್ನ ಪಿಎಚ್. ಡಿ ಅಧ್ಯಯನ ವಿಷಯವನ್ನಾಗಿಸಿಕೊಂಡಿದ್ದಾನೆ. ಆದರೆ ಗುಜರಾತ್ ವಿಶ್ವವಿದ್ಯಾಲಯದಲ್ಲಿ ಈತನಿಗೆ ಇನ್ನೂ ಸೂಕ್ತ ಗೈಡ್ ಸಿಕ್ಕಿಲ್ಲ. id="toptextpromo">ಜೆ.ಕೆ.
ಚೌಹಾನ್ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರ. ಈತ 'ನರೇಂದ್ರ ಮೋದಿಯನ್ನು ಆಧಾರವಾಗಿಸಿಕೊಂಡು 2001ರಿಂದ ಗುಜರಾತಿನಲ್ಲಿ ನಡೆದ ಅಭಿವೃದ್ಧಿ ಪವಾಡದ' ಬಗ್ಗೆ Ph.D ಮಾಡಲು 3 ತಿಂಗಳ ಹಿಂದೆ ವಿವಿಯಲ್ಲಿ ಹೆಸರು ದಾಖಲಿಸಿಕೊಂಡಿದ್ದಾನೆ. id='are-slot-1' class='oiad oi-axt oiadv'> id='top-searched-articles'>'Ph.Dಗಾಗಿ
ಚೌಹಾನ್ ಗೆ ಸೂಕ್ತ ಗೈಡ್ ನೇಮಕ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಈ ವಿಷಯಕ್ಕೆ political science ವಿಷಯದ ಜತೆಗೆ sociology ವಿಷಯದಲ್ಲೂ ಪರಿಣತಿ ಹೊಂದಿರುವ ಪ್ರೊಫೆಸರ್ ಅಗತ್ಯವಿದೆ. ಸದ್ಯಕ್ಕೆ ಗುಜರಾತ್ ವಿವಿಯಲ್ಲಿ ಇಂತಹ ಗೈಡ್ ಇಲ್ಲ. ಆದ್ದರಿಂದ ಹೊರರಾಜ್ಯದ ವಿವಿಗಳಲ್ಲಿ ಸೂಕ್ತ ಗೈಡ್ ತಲಾಶೆ ನಡೆದಿದೆ' ಎಂದು ವಿವಿ ವೈಸ್ ಚಾನ್ಸಲರ್ ಪರಿಮಾಳ್ ತ್ರಿವೇದಿ ತಿಳಿಸಿದ್ದಾರೆ. ಅಂದಹಾಗೆ, ಸ್ವತಃ ತ್ರಿವೇದಿ ಅವರಿಗೇ ಮೋದಿ ಬಗ್ಗೆ ಅಪಾರ ಒಲವು, ಆಸಕ್ತಿ, ತಿಳಿವಳಿಕೆ ಇದೆ.











Click it and Unblock the Notifications