ಭಾರತದ ಕಾಲ್ ಸೆಂಟರ್ ಮೇಲೆ ಅಮೆರಿಕ ಕೆಂಗಣ್ಣು

ಭಾರತ ಹಾಗೂ ಫಿಲಿಫೈನ್ಸ್ ದೇಶಗಳಲ್ಲಿರುವ ಅಮೆರಿಕ ಅವಲಂಬಿತ ಕಾಲ್ ಸೆಂಟರ್ ಗಳ ಮೇಲೆ ಅಮೆರಿಕದ ಕಾಲ್ ಸೆಂಟರ್ ಮಸೂದೆ ಅಥವಾ ಹೊರಗುತ್ತಿಗೆ ವಿರೋಧಿ ಕಾಯ್ದೆ ಮುಖ್ಯ ಟಾರ್ಗೆಟ್ ಆಗಿದೆ.
ಭಾರತ ಸೇರಿಂತೆ ಅಭಿವೃದ್ಧಿಶೀಲ ದೇಶಗಳಿಗೆ ಹೊರಗುತ್ತಿಗೆ ನೀಡುವುದನ್ನು ತಪ್ಪಿಸುವ ಈ ಮಸೂದೆಯನ್ನು ಮಂಡಿಸಲಾಗುತ್ತಿದೆ.
ರಿಪಬ್ಲಿಕನ್ ಟಿಮ್ ಬಿಷಪ್ ಹಾಗೂ ಡೇವಿಡ್ ಮೆಕಿನ್ಲೆ ಮಂಡಿಸಿರುವ 'ಅಮೆರಿಕ ಕಾಲ್‌ಸೆಂಟರ್ ವರ್ಕರ್ ಆ್ಯಂಡ್ ಕನ್‌ಸ್ಯೂಮರ್ ಪ್ರೊಟೆಕ್ಷನ್ ಆ್ಯಕ್ಟ್"(CWA) ಕಾಲ್‌ಸೆಂಟರ್‌ಗಳ ಕಾರ್ಯ ನಿರ್ವಹಣೆಯಲ್ಲಿ ಪ್ರಮುಖ ಬದಲಾವಣೆಗಳನ್ನು ತರುತ್ತಿದೆ.
ಮಸೂದೆಗೆ ಎಲ್ಲೆಡೆ ಬೆಂಬಲ: 'ಹೊರಗುತ್ತಿಗೆ ದೇಶದ ಪ್ರಮುಖ ಸಮಸ್ಯೆಯಾಗಿದೆ. ಇದರಿಂದ ಅಮೆರಿಕದಲ್ಲಿ ನಿರುದ್ಯೋಗ ಹೆಚ್ಚಿದೆ. ಈ ಮಸೂದೆಯನ್ನು ಜಾರಿಗೊಳಿಸಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಬಹುದು' ಎಂದು ಬಿಷಪ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತಾಪಿತ ಕಾಲ್‌ಸೆಂಟರ್ ಮಸೂದೆಗೆ ಅಮೆರಿಕದ ಕಮ್ಯುನಿಕೇಶನ್ ವರ್ಕರ್ಸ್ ಆಫ್ ಅಮೆರಿಕ(ಸಿಡಬ್ಲ್ಯೂಎ) ಸಂಘಟನೆ ಭಾರೀ ಬೆಂಬಲ ಸೂಚಿಸಿದೆ. ಭಾರತದಲ್ಲಿ ಕಾಲ್‌ಸೆಂಟರ್ ಹೊರಗುತ್ತಿಗೆ ಕೇಂದ್ರಗಳು ಭದ್ರತಾ ವೈಫಲ್ಯ ಕಂಡಿದೆ ಎಂದು ಸಿಡಬ್ಲ್ಯೂಎ ಆಪಾದಿಸಿದೆ.
ಈ ಶಾಸನದ ಜಾರಿಯದರೆ ಭಾರತದಲ್ಲಿನ ಅಮೆರಿಕ ಅವಲಂಬಿತ ಕಾಲ್‌ಸೆಂಟರ್ ಗಳು ಭಾರಿ ಆಘಾತ ಅನುಭವಿಸುವ ಸಾಧ್ಯತೆಯಿದೆ.












Click it and Unblock the Notifications