ದೆಹಲಿ ಬಾಲಕಿಯ ಮೇಲೆ ಅನಾಮಿಕನಿಂದ ರೇಪ್

ಸುಲ್ತಾನ್ ಪುರಿ ಬಳಿ ಶಾಲೆಯೊಂದರಲ್ಲಿ ಓದುತ್ತಿರುವ ಹುಡುಗಿಯ ಮೇಲೆ ರಾತ್ರಿ ವೇಳೆ ಅತ್ಯಾಚಾರ ನಡೆದಿದೆ. ವೈದ್ಯಕೀಯ ಪರೀಕ್ಷೆ ನಂತರವೂ ಇದು ದೃಢಪಟ್ಟಿದೆ ಎಂದು ವಾಯುವ್ಯ ದೆಹಲಿ ಪೊಲೀಸರು ಹೇಳಿದ್ದಾರೆ.
ಶಾಲೆಯಿಂದ ಹಿಂತಿರುಗಿದ ಮಗಳು ಅಸಾಧ್ಯ ನೋವು ಅನುಭವಿಸುತ್ತಾ ಅಳುವುದನ್ನು ಗಮನಿಸಿದ ಪೋಷಕರು, ವಿಚಾರಿಸಿದಾಗ ವಿಷಯ ತಿಳಿದು ಬಂದಿದೆ. ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ.
ಆದರೆ, ಅತ್ಯಾಚಾರ ಎಸೆಗಿದ ವ್ಯಕ್ತಿಯ ಚಹರೆ ಬಾಲಕಿಗೆ ನೆನಪಿರದ ಕಾರಣ ಪೊಲೀಸರಿಗೆ ಅನಾಮಿಕ ಕಾಮುಕನನ್ನು ಹಿಡಿಯಲು ತೊಂದರೆಯಾಗುತ್ತಿದೆ. ಆದರೆ, ಈ ಹೀನ ಕೃತ್ಯ ಎಸೆಗಿದ ವ್ಯಕ್ತಿಯನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಸುಲ್ತಾನ್ ಪುರಿ ಠಾಣಾಧಿಕಾರಿ ಹೇಳಿದ್ದಾರೆ.












Click it and Unblock the Notifications