ಡುರೊಂಟೋ ಎಕ್ಸ್ ಪ್ರೆಸ್ ಗಳಿಗೂ ತತ್ಕಾಲ್ ಸೇವೆ ಲಭ್ಯ

ಇದರ ಜೊತೆಗೆ ಆಧಾರ್ ಕಾರ್ಡ್ ಗಳನ್ನು ಗುರುತಿನ ಚೀಟಿ(ಐಡಿ ಕಾರ್ಡ್) ರೀತಿಯಲ್ಲಿ ಬಳಸಬಹುದು ಎಂದು ಇಲಾಖೆ ಹೇಳಿದೆ. ಪ್ರಯಾಣದ ದಿನಾಂಕಕ್ಕಿಂತ 24 ಗಂಟೆಗಳ ಮೊದಲು ತತ್ಕಾಲ್ ಸೇವೆ ಬಳಸಿ ಟಿಕೇಟ್ ಬುಕ್ ಮಾಡಬಹುದಾಗಿದೆ.
ಆದರೆ, ಈ ವ್ಯವಸ್ಥೆ ಜಾರಿಗೊಳ್ಳಲು ಇನ್ನೂ ಸ್ವಲ್ಪ ಸಮಯ ಕಾಯಬೇಕಿದೆ. ಬಹುಶಃ ಏ.1,2012 ರ ವೇಳೆಗೆ ಎಲ್ಲಾ ವಲಯಗಳಲ್ಲೂ ಈ ವ್ಯವಸ್ಥೆ ಜಾರಿಗೆ ಬರಲಿದೆ.
ಡುರೊಂಟೋ ಟ್ರೈನ್ ಗಳಿಗೆ ತತ್ಕಾಲ್ ವ್ಯವಸ್ಥೆ ಬಂದರೂ ಟಿಕೇಟ್ ದರದಲ್ಲಿ ಹೆಚ್ಚು ಕಮ್ಮಿ ಏನು ಆಗೋಲ್ಲ. ಸಾಮಾನ್ಯ ದರದ ರೈಲುಗಳಿಗೆ ಇರುವ ತತ್ಕಾಲ್ ದರವೇ ಡುರೊಂಟೋ ರೈಲುಗಳಿಗೂ ಅನ್ವಯವಾಗುತ್ತದೆ.
ಆಧಾರ್ ಕಾರ್ಡ್ ಜೊತೆಗೆ ಮತದಾರರ ಗುರುತಿನ ಚೀಟಿ, ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಬುಕ್ (ಭಾವಚಿತ್ರ ಸಹಿತ), ಕ್ರೆಡಿಟ್ ಕಾರ್ಡ್ ಗಳನ್ನು ಗುರುತಿನ ಚೀಟಿಯಾಗಿ ಪರಿಗಣಿಸಲಾಗುತ್ತದೆ. ಆನ್ ಲೈನ್ ನಲ್ಲಿ ತತ್ಕಾಲ್ ಮೂಲಕ ಟಿಕೇಟ್ ಬುಕ್ ಮಾಡಿದವರು ಈ ಆಧಾರಗಳನ್ನು ಪ್ರಯಾಣದ ವೇಳೆ ಹೊಂದಿರಲೇಬೇಕು.












Click it and Unblock the Notifications