ವಿದ್ಯಾ ಯಾಕಮ್ಮ ಡರ್ಟಿ ಆದೆ, ಮೂಡಿಗೆರೆ ಮೋಟಮ್ಮ ಅಳಲು

Motamma on Vidya Balan
ಬೆಂಗಳೂರು, ಡಿ.21: ದುಡ್ಡಿನ ಆಸೆಗೆ ಬಿದ್ದು ನಮ್ಮತನ ಕಳೆದುಕೊಳ್ಳುತ್ತಿದ್ದೇವೆ. ದುಡ್ಡಿನ ಆಸೆ ಮೈಮಾರಿಕೊಳ್ಳುವ ದಂಧೆ ಜೊತೆಗೆ ಸಿನಿಮಾಗಳಲ್ಲಿ ಅಶ್ಲೀಲತೆ ತನ್ನ ಬೇಲಿ ಕಿತ್ತು ಬೆತ್ತಲಾಗಿದೆ ಎಂದು ಪ್ರತಿಪಕ್ಷ ನಾಯಕಿ ಮೂಡಿಗೆರೆ ಮೋಟಮ್ಮ ಅವರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯ ಮಹಿಳಾ ಆಯೋಗ, ಬೆಂಗಳೂರು ವಿ.ವಿ. ಮತ್ತು ಎನ್‌ಎಂಕೆಆರ್‌ವಿ ಕಾಲೇಜು ಮಹಿಳಾ ಅಧ್ಯಯನ ವಿಭಾಗಗಳ ಆಶ್ರಯದಲ್ಲಿ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿಂದು 'ಮಹಿಳೆಯರನ್ನು ಬಿಂಬಿಸುವಲ್ಲಿ ಮಾಧ್ಯಮಗಳ ಪಾತ್ರ ಮತ್ತು ಹೊಣೆಗಾರಿಕೆ' ವಿಷಯವಾಗಿ ನಡೆದ ವಿಚಾರಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮೋಟಮ್ಮ ಮಾತಾಡಿದರು.

ವಿದ್ಯಾಬಾಲನ್ ಗೆ ಏನಾಗಿದೆ?: ಸಿಲ್ಕ್ ಸ್ಮಿತಾ ಚಲನಚಿತ್ರ ಮಾಧ್ಯಮದಲ್ಲಿ ಪುರುಷರಿಂದ ದೌರ್ಜನ್ಯಕ್ಕೆ ಒಳಗಾಗಿ ದುರಂತ ಅಂತ್ಯಕಂಡ ಮಹಿಳೆ. ಆದರೆ, ಡರ್ಟಿ ಫಿಕ್ಚರ್ ಚಿತ್ರದಲ್ಲಿ ಇದನ್ನು ಅಶ್ಲೀಲೆ ಸೋಂಕಿಲ್ಲದೆ ತೋರಿಸಬಹುದಾಗಿತ್ತು.

ಅನಗತ್ಯವಾಗಿ ವಿದ್ಯಾಬಾಲನ್ ಕೇವಲ ಹಣಕ್ಕಾಗಿ ಅಶ್ಲೀಲವಾಗಿ ಕಾಣಿಸಿಕೊಂಡಿದ್ದು ಸರಿಯಲ್ಲ. ಭಾರತೀಯ ಚಿತ್ರರಂಗದಲ್ ಪ್ರತಿಭಾವಂತ ಕಲಾವಿದೆ ವಿದ್ಯಾಬಾಲನ್ ಈ ಚಿತ್ರದ ಮೂಲಕ ತನ್ನತನವನ್ನು ಕಳೆದುಕೊಂಡಿದ್ದಾಳೆ ಎಂದು ಮೋಟಮ್ಮ ವ್ಯಥೆ ಪಟ್ಟರು.

ಲೈಂಗಿಕ ದೌರ್ಜನ್ಯ, ಬಲಾತ್ಕಾರ ಸುದ್ದಿಯನ್ನು ಪೈಪೋಟಿಗೆ ಬಿದ್ದು ವೈಭವೀಕರಿಸಿ ಸುದ್ದಿ ಪ್ರಸಾರ ಮಾಡುವುದನ್ನು ಟಿವಿ ವಾಹಿನಿಗಳು ಕೈಬಿಟ್ಟರೆ ಒಳ್ಳೆಯದು. ಮಹಿಳೆ ಕೂಡಾ ತನ್ನತನ ಉಳಿಸಿಕೊಂಡು ಸಮಾಜದಲ್ಲಿ ತಲೆ ಎತ್ತಿ ಬಾಳಬೇಕು ಎಂದು ಮೋಟಮ್ಮ ಎಚ್ಚರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+