ಕಿಂಗ್ ಫಿಷರ್ ನೌಕರರಿಗೆ ಉಂಡೆನಾಮ ತಿಕ್ಕಿದ ಹೆಂಡದ ದೊರೆ ಮಲ್ಯ

cash-strapped-kingfisher-fails-to-deposit-staff-tds
ನವದೆಹಲಿ, ಡಿ. 21: ಮೊನ್ನೆ ತಮ್ಮ ಹುಟ್ಟುಹಬ್ಬದಂದು ಹಿರಿಯಣ್ಣ ಹಜಾರೆಯ ಭ್ರಷ್ಟಾಚಾರ ವಿರೋಧ ಚಳವಳಿ ಬಗ್ಗೆ ಲಘುವಾಗಿ ಮಾತನಾಡಿದ್ದ ಅಗ್ರಮಾನ್ಯ ಸಾಲಗಾರ ಕಿಂಗ್ ಫಿಷರ್ ಏರ್ ಲೈನ್ಸ್ ಮಾಲೀಕ, ಹೆಂಡದ ದೊರೆ ವಿಜಯ್ ಮಲ್ಯ ಮತ್ತಷ್ಟು ಪಾತಾಳಕ್ಕೆ ಕುಸಿದಿದ್ದಾರೆ. ಸಾಲದ ಹೊರೆಯನ್ನು ತಗ್ಗಿಸಿಕೊಳ್ಳಲು ಸಂಸ್ಥೆಯು ತನ್ನ ವಿಮಾನಗಳು ಮತ್ತು ಮುಂಬೈನಲ್ಲಿರುವ ಆಸ್ತಿಯನ್ನು ಮಾರಿಕೊಳ್ಳಲು ನಿರ್ಧರಿಸಿದೆ.

ಸದಾ ತೇಲುಗಣ್ಣು ಮೇಲುಗಣ್ಣಿನಲ್ಲಿ ಆಕಾಶದಲ್ಲೇ ಹಾರುತ್ತಿದ್ದ ಮಲ್ಯ ಸಾಹೇಬರು ಸ್ವತಃ ತಮ್ಮ ಉದ್ಯೋಗಿಗಳಿಗೇ ಉಂಡೆನಾಮ ತಿಕ್ಕಿದ್ದಾರೆ. ಕಳೆದ ಆರ್ಥಿಕ ವರ್ಷದಲ್ಲಿ ಅಂದರೆ 2010ರ ಏಪ್ರಿಲ್ 1ರಿಂದ ಮಲ್ಯ ಸಾಹೇಬರು ತಮ್ಮ ನೌಕರರ ಸಂಬಳದಲ್ಲಿ ಕಡಿತ ಮಾಡುವ ತೆರಿಗೆಯನ್ನು (ಅಂದರೆ 153 ಕೋಟಿ ರುಪಾಯಿ TDS) ಸರಕಾರಕ್ಕೆ ಇನ್ನೂ ಪಾವತಿಸಿಲ್ಲ. 2012ರ ಮಾರ್ಚ್ ತಿಂಗಳೊಳಗಾಗಿ ಈ ಮೊತ್ತವನ್ನು ಕಿಂಗ್ ಫಿಷರ್ ಏರ್ ಲೈನ್ಸ್ ಭರ್ತಿ ಮಾಡಬೇಕಿದೆ.

ಕಿಂಗ್ ಫಿಷರ್ ಏರ್ ಲೈನ್ಸ್ ನೌಕರರಿಗೆ ನೋಟಿಸ್ ಮೇಲೆ ನೋಟಿಸ್ ಕಳಿಸಿ ತೆರಿಗೆಯನ್ನು ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ತಾಕೀತು ಮಾಡಿದಾಗಲೇ ನೌಕರರಿಗೆ ತಮ್ಮ ಸಂಬಳದಲ್ಲಿ ಕಡಿತವಾಗಿರುವ ತೆರಿಗೆ ಇಲಾಖೆಗೆ ಪಾವತಿಯಾಗಿಲ್ಲ ಎಂಬ ಸತ್ಯ ಅರಿವಾಗಿದ್ದು.

ಈಗ ಬಡ್ಡಿ ಮತ್ತು ದಂಡ ಸಹಿತ ಬಾಕಿ ತೆರಿಗೆ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಎಸ್ಎಸ್ ಮಳನಿಮಾಣಿಕ್ಯಂ ಸಂಸತ್ತಿಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಇತ್ತೀಚೆಗೆ ಸೇವಾ ತೆರಿಗೆ ಬಾಬತ್ತಿನಲ್ಲಿ ಕಿಂಗ್ ಫಿಷರ್ ಏರ್ ಲೈನ್ಸ್ ಸುಮಾರು 70 ಕೋಟಿ ರುಪಾಯಿ ಬಾಕಿ ಉಳಿಸಿಕೊಂಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+