ಯಡ್ಡಿ ಕಾಲಿಗೆ ಬಿದ್ದ ಮಹಿಳೆ ಯಾರು ಅಂತ ಗೊತ್ತಾಯ್ತು

seema-masuthi-seeks-bsy-blessings-in-assembly
ಬೆಂಗಳೂರು, ಡಿ.20: ಸರಿಯಾಗಿ 12 ದಿನಗಳ ಹಿಂದೆ ಚಿತ್ರವೊಂದನ್ನು ತೋರಿಸಿ, ಯಡ್ಡಿ ಕಾಲಿಗೆ ಬಿದ್ದಿರುವ ಈ ಮಹಿಳೆ ಯಾರು ಗೊತ್ತಾ!? ಅಂತ 'ದಟ್ಸ್ ಕನ್ನಡ'ದಲ್ಲಿ ಕೇಳಲಾಗಿತ್ತು. ಓದುಗರು ಮುಗಿಬಿದ್ದು ನಾಮುಂದು ತಾಮುಂದು ಎಂದು ಉತ್ತರ ನೀಡಿದ್ದಾರೆ. ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿಜಕ್ಕೂ ಖುಷಿಯಾಗುತ್ತಿದೆ.

ಇಂದು ಬೆಳಗ್ಗೆ ಬಹುತೇಕ ಎಲ್ಲ ದಿನಪತ್ರಿಕೆಗಳಲ್ಲೂ ಶೋಭಾ ಕರಂದ್ಲಾಜೆ ಮತ್ತು ಯಡಿಯೂರಪ್ಪ ಅವರು ಯಾರನ್ನೇ ಆಗಲಿ ನಾಚಿಸುವಂತೆ 'ವಾಜಪೇಯ ಯಾಗ'ಕ್ಕಾಗಿ ಅಕ್ಕಪಕ್ಕ ಕುಳಿತಿರುವ ಫೋಟೋ ನೋಡಿ, ಏನೋ ಜ್ಞಾಪಿಸಿಕೊಂಡವರಂತೆ ಈಗ್ಲಾದರೂ ಹೇಳಿ ಯಾರು ಆ ಮಹಿಳೆ ಅಂತ 'ದಟ್ಸ್ ಕನ್ನಡ'ಕ್ಕೆ ಒಂದೇ ಸಮನೆ ಫೋನ್ ಮಾಡಿ ಕೇಳುತ್ತಿದ್ದಾರೆ. ಹಾಗಾಗಿ ಈಗ ಉತ್ತರ ಹೇಳುವ ಸಮಯ ಬಂದಿದೆ. ಆದರೆ...

ನಿಜಕ್ಕೂ ಕಣ್ರಿ ಬಹಳಷ್ಟು ಮಂದಿ ಬೇಸ್ತು ಬಿದ್ದಿದ್ದಾರೆ. ಒಬ್ಬ ನಿರ್ದಿಷ್ಟ ಮಹಿಳೆಯನ್ನು ಕೇಂದ್ರೀಕರಿಸಿಕೊಂಡೇ ಹೆಚ್ಚಾಗಿ ಉತ್ತರ ನೀಡಿದ್ದಾರೆ. ಆದರೆ ನಿಜಕ್ಕೂ ನಿಜವಾದ ಉತ್ತರ ನೀಡಿರುವವರು ಚುಕ್ಕಿ ಪ್ರಕಾಶ್ ಮತ್ತು ಸಾರಿಕಾ ಮಾತ್ರ. ಉಳಿದವರ ಉತ್ತರಗಳನ್ನು ನೋಡಿದರೆ ಒಳಗೊಳಗೇ ನಗುಬರುತ್ತದೆ...ಏಕೆಂದರೆ

ಉತ್ತರಗಳು ಥರಹೇವಾರಿಯಾಗಿವೆ. ಅದು ಯಡಿಯೂರಪ್ಪನವರ ಬಗ್ಗೆ ಇರುವ ಮೆಚ್ಚುಗೆಯೋ, ಕೋಪವೋ ಅಥವಾ ತಪ್ಪು ಉತ್ತರವಾಗಿ ತಿಳಿಸಿರುವ ಮಹಿಳೆಯ ಬಗ್ಗೆಯೋ ತಿಳಿಯದಾಗಿದೆ. ಮೊಟ್ಟಮೊದಲ ಉತ್ತರವೇ 'ಶೋಬಕ್ಕ ಅನ್ಸುತ್ತೆ' ಎಂದು ಆರಂಭವಾಗಿದೆ. ಆ ಮಹಿಳೆ ಬೇರೆ ಯಾರು ಅಲ್ಲ ಶೋಭಾ ಕರಂದ್ಲಾಜೆ ... ಎಂದು ಖಚಿತ ದನಿಯಲ್ಲಿ ಹೇಳಿದವರೂ ಅನೇಕ ಮಂದಿ. ಮಂಜು ಎಂಬುವವರು ಶೋಭಾಕ್ಕನ ಹಗಲು ವೇಷ ಎಂದು ತಮ್ಮ ರೋಷವನ್ನು ಹೊರಹಾಕಿದ್ದಾರೆ.

ಆಶ್ಚರ್ಯದ ಸಂಗತಿಯೆಂದರೆ ಮಧ್ಯೆ ಅನಿತಾ ಕುಮಾರಸ್ವಾಮಿ ಅವರ ಹೆಸರನ್ನೂ ತಂದಿದ್ದಾರೆ. ಅಲ್ಲ ಕಣ್ರಿ, ಹೋಗಿ ಹೋಗಿ ಅನಿತಾ ಅವರು ಯಡ್ಡಿ ಕಾಲಿಗೆ ಯಾಕೆ ಬೀಳುತ್ತಾರೆ. ಅಂತಹ ದರ್ದು ಆಕೆಗೆ ಏನಿದೆ. ಇರ್ಲಿ ಬಿಡಿ.

ಮುಂದೆ ಕೇಸರಿ ಕರಣ ಎಂಬುವವರು 'ಶೊಭಾಕ್ಕ ಇರಲಿ ಗುಭಕ್ಕನೆ ಇರಲಿ ನಿಮಗೆ ಯಾಕೆ? ಈ ಪ್ರಶ್ನೆ ಕೇಳಿದವರಿಗೆ ಬೇರೆ ಕೆಲಸವಿಲ್ಲವೇ? ಅದೆಕ್ಕೆ ಕನ್ನಡದವರೇ ಉದ್ಧಾರ ಆಗೋಲ್ಲ' ಎಂದೆಲ್ಲ ಫರ್ಮಾನು ಹೊರಡಿಸಿದ್ದಾರೆ. ಸಂತೋಷವೇ. ಆದರೆ ಇದರಲ್ಲಿ ಕನ್ನಡ ಉದ್ಧಾರಕ್ಕೂ, ಮಾಡುವುದಕ್ಕೆ ಕ್ಯಾಮ್ ಇಲ್ಲ ಅನ್ನುವುದಕ್ಕೂ, ಗುಭಕ್ಕ ಅನ್ನುವುದಕ್ಕೂ ಸಂಬಂಧವೇ ಇಲ್ಲ.

ಆಯ್ತು ಅಂದು ರಾಜ್ಯ ವಿಧಾನಸಭೆಯ ಮೂರನೆಯ ದಿನದ ಕಲಾಪದ ವೇಳೆ ವಿಧಾನಸೌಧದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಾಲಿಗೆ ಬಿದ್ದಿರುವವರು ಯಾರು ಅಂತ ಹೇಳುವ ಕಾಲ ಈಗ ಬಂದಿದೆ. ಆ ಮಹಿಳೆ ನೀವು ತಿಳಿದಂತೆ ಖಂಡಿತ ಶೋಭಾ ಮೇಡಂ ಅಲ್ಲವೇ ಅಲ್ಲ. ಆದರೆ ನಮ್ಮ ಓದುಗರಾದ ಚುಕ್ಕಿ ಪ್ರಕಾಶ್ ಮತ್ತು ಸಾರಿಕಾ ಅವರು ಹೇಳಿದಂತೆ ಯಡ್ಡಿಯೂರಪ್ಪ ಅವರ ಕಾಲಿಗೆ ಬಿದ್ದ ಮಹಿಳೆ ಯಾರು ಅಂದರೆ... ಸೀಮಾ ಮಸೂತಿ! ನಮ್ಮ ಫೋಟೋಗ್ರಾಫರ್ ಸಹ ಇದನ್ನು ದೃಢಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+