ಕ್ರಿಸ್ಮಸ್ ಜಾಹೀರಾತಿನಲ್ಲಿ ಗರ್ಭಿಣಿ ಮೇರಿ, ಫುಲ್ ಗಲಾಟೆ

ಸಂತ ಮ್ಯಾಥ್ಯೂ ಚರ್ಚ್(Anglican church) ನಲ್ಲಿ ಪ್ರದರ್ಶಿಸಿದ ಜಾಹೀರಾತು ಜನರನ್ನು ಕೆರಳಿಸಿದೆ. ಅದರೆ, ಚರ್ಚ್ ಮುಖ್ಯಸ್ಥರು ತಮ್ಮ ವೆಬ್ ತಾಣದಲ್ಲಿ
"Christmas is real. It's about a real pregnancy, a real mother and a real child. It's about real anxiety, courage and hope,"
ಎಂದು ಸಮರ್ಥಿಸಿಕೊಂಡಿದೆ.
ಸಮಾಜದಲ್ಲಿ ಶೋಷಿತ ಮಹಿಳೆಯರ ಪ್ರತಿನಿಧಿಯಾಗಿ ಮೇರಿ ಮಾತೆಯನ್ನು ಬಿಂಬಿಸಲಾಗಿದೆ. ಬಡತನ, ಅನಾರೋಗ್ಯ, ಅಶಾಂತಿಯಿಂದ ಶಾಂತಿ ಸಹಬಾಳ್ವೆನ್ನು ಕಳೆದುಕೊಂಡು ಕ್ರಿಸ್ಮಸ್ ನ ನಿಜವಾದ ಸಂಭ್ರಮವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಈ ಜಾಹೀರಾತು ಹೇಳುತ್ತದೆ ಎನ್ನಲಾಗಿದೆ.
ಸಾಂಪ್ರದಾಯಿಕ ಕ್ಯಾಥೋಲಿಕ್ ಸಂಘಗಳು ಚರ್ಚ್ ವಿರುದ್ಧ ಪ್ರತಿಭಟನೆ ನಡೆಸಿದ್ದು, ಪರಿಸ್ಥಿತಿ ಉದ್ವಿಗ್ನವಾಗಿದೆ.
2009ರಲ್ಲಿ ಇದೇ ಚರ್ಚ್ ಜಾಹೀರಾತೊಂದರಲ್ಲಿ ಮೇರಿ ಹಾಗೂ ಜೋಸೆಫ್ ರನ್ನು ನಗ್ನವಾಗಿ ತೋರಿಸಲಾಗಿತ್ತು, "Poor Joseph. God was a hard act to follow," ಎಂದು ಅಡಿ ಬರಹ ನೀಡಿ ಪ್ರದರ್ಶಿಸಲಾಗಿತ್ತು.












Click it and Unblock the Notifications