ಗಾಂಧಿ ಬಜಾರಿಗೆ ಬಂದ ಬೆಳಗೆರೆ ಪುಸ್ತಕ ಹಾಗೂ ಕಾಫಿ

ಹೂವು ಕೊಳ್ಳಲಿಕ್ಕೆ, ಹಣ್ಣು ಕೊಳ್ಳಲಿಕೆ, ವಿದ್ಯಾರ್ಥಿ ಭವನದ ದೋಸೆ ತಿನ್ನಲು ಬರುವವರು ಅಥವಾ, ರೋಟಿ ಘರ್ ನಲ್ಲಿ ಊಟ ಮಾಡುವುದಕ್ಕೆ ಬಂದಾಗ ಬೆಳೆಗೆರೆಯ ಈ ಪುಟ್ಟ ಪುಸ್ತಕ ಅಂಗಡಿ' ಬೆಳೆಗೆರೆ ಬುಕ್ಸ್ ಅಂಡ್ ಕಾಫಿ' ಗೆ ಭೇಟಿ ಕೊಡಿ.
ಇಲ್ಲಿ ಕೇವಲ ರವಿ ಬೆಳೆಗೆರೆ ಪುಸ್ತಕಗಳು ಮಾತ್ರವಲ್ಲ. ಕನ್ನಡ-ಇಂಗ್ಲೀಷಿನ ಸಮಸ್ತ ಲೇಖಕರ ಪುಸ್ತಕ, ಸಿಡಿಗಳು ಮಾರಾಟಕ್ಕೆ ಲಭ್ಯವಿರುತ್ತದೆ, ಸಮಯ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆ ತನಕ.
ಸಂಜೆ ಬಿಡುವಾದಾಗ ಸ್ವತಃ ರವಿ ಬೆಳೆಗೆರೆ ಕೈಯಿಂದ ಪುಸ್ತಕ ಪಡೆದು, ಕಾಫಿ ಹೀರಿ, ಹಸ್ತಾಕ್ಷರ ಪಡೆಯಬಹುದು. ಹಿರಿಯ ಸಾಹಿತಿಗಳನ್ನು ಕರೆಸಿ ಸಂಜೆ ಹೊತ್ತು ಹರಟೆ ಏರ್ಪಡಿಸುವ ಇರಾದೆ ಕೂಡಾ ಆರ್ ಬಿ ಅವರಿಗಿದೆ.
ಫೆ 5 , ಸಂಜೆ 4.30 ಗೆ ಮರೀಬೇಡಿ.. ವಿಳಾಸ ನೋಟ್ ಮಾಡ್ಕೊಳ್ಳಿ..ರೋಟಿ ಘರ್ ನಿಂದ ಎರಡನೇ ಮಳಿಗೆ.. ವಿದ್ಯಾರ್ಥಿ ಭವನದಿಂದ ಐದನೇ ಮಳಿಗೆ












Click it and Unblock the Notifications