ವೈದ್ಯ ವಿದ್ಯಾರ್ಥಿನಿ ಮೇಲೆ ಡಾಕ್ಟರ್ ಮಾನಭಂಗ

ಆರೋಪಿಯು ರೆಸಿಡೆಂಟ್ ಡಾಕ್ಟರ್ ಆಗಿದ್ದು, ಪ್ರಾಯೋಗ ಶಾಲೆಯಲ್ಲಿದ್ದ ಇಂಟರ್ನ್ ವಿದ್ಯಾರ್ಥಿನಿಯ ಮೇಲೆ ಮಾನಭಂಗಕ್ಕೆ ಯತ್ನಿಸಿದ್ದಾನೆ. ಘಟನೆ ನಡೆದಾಗ ಬಾಧಿತ ವಿದ್ಯಾರ್ಥಿನಿಯು ಸಹಾಯಕ್ಕೆ ಕಿರುಚಿಕೊಂಡಾಗ ಸಿಬ್ಬಂದಿ ಆಕೆಯ ನೆರವಿಗೆ ಬಂದಿದ್ದಾರೆ.
ಆದರೆ ಆರೋಪಿ ವೈದ್ಯಮಹಾಶಯ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಕಾಲೇಜು ಸಿಬ್ಬಂದಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ. ಆದರೆ ಬಾಧಿತ ವಿದ್ಯಾರ್ಥಿನಿ ಗುರುವಿಗೆ ತಕ್ಕ ಪಾಠ ಕಲಿಸಲು ಮನಸ್ಸು ಮಾಡಿ, ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ನಂತರ ಕಾಲೇಜು ಆಡಳಿತವೂ ವಿದ್ಯಾರ್ಥಿನಿಯ ಬೆಂಬಲಕ್ಕೆ ನಿಂತಿದೆ.
ಲೈಂಗಿಕ ಕಿರುಕುಳ ಆರೋಪದಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಘಟನೆಯ ಬಗ್ಗೆ ವರದಿ ತರಿಸಿಕೊಂಡ ನಂತರ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ವೈದ್ಯಕೀಯ ಕಾಲೇಜಿನ ಪ್ರಿನ್ಸಿಪಾಲ್ ಡಾ. ಅನಿಲ್ ಚೌಹಾನ್ ತಿಳಿಸಿದ್ದಾರೆ.












Click it and Unblock the Notifications