ಟಿಸಿಎಸ್ ಗೆ ಬಾಂಬ್ ಬೆದರಿಕೆ, ಟೆಕ್ಕಿಗಳು ಉದ್ವಿಗ್ನ

ಟಿಸಿಎಸ್ ತರಬೇತಿ ಕೇಂದ್ರ ಅಲ್ಲದೆ ಹತ್ತು ಹಲವು ಐಟಿ ಕಂಪೆನಿಗಳು ಈ ಐಟಿ ಪಾರ್ಕ್ ನಲ್ಲಿದೆ. ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಹಾಗೂ ವಿಶೇಷ ಪೊಲೀಸ್ ಪಡೆ ಸ್ಥಳಕ್ಕೆ ಆಗಮಿಸಿದ್ದು, ಪರಿಸ್ಥಿತಿಯನ್ನು ತಿಳಿಗೊಳಿಸುತ್ತಿದ್ದಾರೆ.
ಶುಕ್ರವಾರ ಮುಂಜಾನೆ ಬಾಂಬ್ ಬೆದರಿಕೆ ಕರೆ ಬಂದ ತಕ್ಷಣ ಟ್ರೈನಿಗಳು, ಉದ್ಯೋಗಿಗಳನ್ನು ಕಚೇರಿಯಿಂದ ಹೊರ ಬರುವಂತೆ ಸೂಚಿಸಲಾಯಿತು. ಬೇರೆ ಕಡೆಗೆ ಎಲ್ಲರನ್ನು ಸ್ಥಳಾಂತರಿಸಲಾಗಿದೆ.
ಅಂಬತ್ತೂರಿನ ತರಬೇತಿ ಕೇಂದ್ರಕ್ಕೆ ಮಾತ್ರ ಬೆದರಿಕೆ ಬಂದಿರುವುದರಿಂದ ಇತರೆ ಕೇಂದ್ರಗಳು ಎಂದಿನಂತೆ ತಮ್ಮ ಕೆಲಸ ನಿರ್ವಹಿಸುತ್ತಿದೆ ಎಂದು ಟಿಸಿಎಸ್ ವಕ್ತಾರರು ಹೇಳಿದ್ದಾರೆ.












Click it and Unblock the Notifications