ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ಉಷಾ ಉತ್ತುಪ್

HD Kumaraswamy
ಮಂಡ್ಯ, ಡಿ.15: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರ 53ನೇ ಹುಟ್ಟುಹಬ್ಬವನ್ನು ಡಿ.16ರಂದು ಮಳವಳ್ಳಿಯ ಸರಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಭರ್ಜರಿಯಾಗಿ ಆಚರಿಸಲಾಗುವುದು ಎಂದು ಮಾಜಿ ಶಾಸಕ ಕೆ ಅನ್ನದಾನಿ ಹೇಳಿದ್ದಾರೆ.

ಬರ್ಥ್ ಡೇ ಬಾಯ್ ಕುಮಾರಸ್ವಾಮಿ ಜೊತೆಗೆ ಸಂಸದ ಎನ್ ಚಲುವರಾಯಸ್ವಾಮಿ, ಜಿಲ್ಲೆಯ ಜೆಡಿಎಸ್ ಶಾಸಕರು, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ.

ರಸಮಂಜರಿ ಕಾರ್ಯಕ್ರಮ: ಚಲನಚಿತ್ರ ಗಾಯಕ ರಾಜೇಶ್ ಕೃಷ್ಣನ್ ಹಾಗೂ ಸುಗಮ ಸಂಗೀತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ನೇತೃತ್ವದಲ್ಲಿ ರಸಮಂಜರಿ ಕಾರ್ಯಕ್ರಮ ಅಯೋಜಿಸಲಾಗಿದೆ. ಹಿಂದಿ ಪಾಪ್ ಗಾಯಕಿ ಉಷಾ ಉತ್ತುಪ್ ಸೇರಿದಂತೆ ಹಲವಾರು ಚಲನಚಿತ್ರ ನಟ, ನಟಿಯರು ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಜೆಡಿಎಸ್ ಜಿಲ್ಲಾ ಘಟಕ ಹೇಳಿದೆ.

ಕುಮಾರಸ್ವಾಮಿ ಬಗ್ಗೆ ವಸಿ: 1959ನೇ ಇಸವಿ ಡಿ.16ರಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಚೆನ್ನಮ್ಮ ದಂಪತಿಗಳ ಮೂರನೇ ಪುತ್ರನಾಗಿ ಕುಮಾರಸ್ವಾಮಿ ಜನಿಸಿದರು. ಚಿತ್ರ ನಿರ್ಮಾಪಕ, ವಿತರಕ, ಥೇಟರ್ ಮಾಲೀಕ ವೃತ್ತಿ ನಂತರ ರಾಜಕೀಯಕ್ಕೆ ಇಳಿದು ಕರ್ನಾಟಕದ ಮುಖ್ಯಮಂತ್ರಿಗಳಾಗಿ ರಾಜ್ಯಭಾರ ಮಾಡಿದ್ದಾರೆ.

ಬೆಂಗಳೂರಿನ ಎಂಇಎಸ್ ವಿದ್ಯಾ ಸಂಸ್ಥೆಯಲ್ಲಿ ಹೈಸ್ಕೂಲು, ವಿಜಯ ಕಾಲೇಜಿನಲ್ಲಿ ಪಿಯೂಸಿ, ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಬಿಎಸ್ ಸಿ ಪದವಿ ಗಳಿಸಿದ್ದಾರೆ.
ಅರಮನೆ ಮೈದಾನದಲ್ಲಿ ಮಾರ್ಚ್ 13, 1986ರಂದು ಅನಿತಾ ಅವರನ್ನು ಮದುವೆಯಾದರು. ಮಧುಗಿರಿ ಶಾಸಕಿ ಅನಿತಾ ಕುಮಾರಸ್ವಾಮಿ ಹಾಗೂ ಕುಮಾರಸ್ವಾಮಿ ಅವರು ನಿಖಿಲ್ ಎಂಬ ಪುತ್ರನನ್ನು ಹೊಂದಿದ್ದಾರೆ. ಕುಮಾರಸ್ವಾಮಿ ಅವರು ಹಾಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದನಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+