ನಂದಿನಿ ಹಾಲು ಬೆಲೆ ಏರಿಕೆಗೆ ಮತ್ತೆ ಹುನ್ನಾರ

ಉತ್ಪಾದನೆ ವೆಚ್ಚ ಹೆಚ್ಚಳ, ಸಾಗಣಿಕೆ ವ್ಯವಸ್ಥೆಯಲ್ಲಿ ವ್ಯತ್ಯಯದ ಹಿನ್ನೆಲೆಯಲ್ಲಿ ಮಹಾಮಂಡಲ ದರ ಹೆಚ್ಚಳಕ್ಕೆ ಮುಂದಾಗಲು ಕಾರಣ ಎನ್ನಲಾಗಿದೆ. ಪ್ರತೀ ಲೀಟರ್‌ಗೆ 4 ರೂ ಹೆಚ್ಚಿಸುವ ಬಗ್ಗೆ ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಹಾ ಮಂಡಲದ ಮೂಲಗಳು ತಿಳಿಸಿವೆ.
ಎರಡು ಬಾರಿ ದರ ಹೆಚ್ಚಳದಿಂದ 16 ರೂಪಾಯಿನಿಂದ 21 ರೂಪಾಯಿಗೆ ತಲುಪಿದ್ದ ದರ ಈಗ 4 ರೂಪಾಯಿ ಹೆಚ್ಚಳವಾದರೆ 25 ರೂಪಾಯಿಗೆ ತಲುಪಲಿದೆ.
'ಇತ್ತೀಚೆಗೆ ತಮಿಳುನಾಡಿನಲ್ಲಿ ಹಾಲಿನ ದರವನ್ನು 20.50 ರೂಪಾಯಿನಿಂದ 27 ರೂಪಾಯಿಗೆ ಏರಿಸಲಾಗಿದೆ. ಖಾಸಗಿ ಹಾಲಿನ ಬೆಲೆ 27 ರೂಪಾಯಿ ಇದೆ. ನಂದಿನಿ ಹಾಲಿನ ದರ 25 ರೂಪಾಯಿಗೆ ಹೆಚ್ಚಿಸಿದರೂ ಗ್ರಾಹಕರಿಗೆ ಹೆಚ್ಚು ಹೊರೆ ಆಗುವುದಿಲ್ಲ ಎಂದು ಕೆಎಂಎಫ್ ದರ ಹೆಚ್ಚಳಕ್ಕೆ ಸಮರ್ಥನೆ ನೀಡಿದೆ.
ಶಿವಮೊಗ್ಗ ಕೆಎಂಎಫ್ ಗೆ ಪ್ರಶಸ್ತಿ: ಶಿವಮೊಗ್ಗ ಡೈರಿ ವಿಭಾಗವು 'ರಾಷ್ಟ್ರೀಯ ಶಕ್ತಿ ಸಂಗೋಪನೆ ಪ್ರಶಸ್ತಿ-2011'ಗೆ ಆಯ್ಕೆಯಾಗಿದೆ.
ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಕೇಂದ್ರ ಇಂಧನ ಖಾತೆ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಶಿವಮೊಗ್ಗ ಹಾಲು ಒಕ್ಕೂಟ ವ್ಯವಸ್ಥಾಪಕ ನಿರ್ದೇಶಕ ಪಿಡಿ ಹಂಪಾಳಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಕರ್ನಾಟಕ ವಾರ್ತಾ ಇಲಾಖೆಯ ಉಪ ನಿರ್ದೇಶಕರು ಸುದ್ದಿಗಾರರಿಗೆ ತಿಳಿಸಿದ್ದಾರೆ.












Click it and Unblock the Notifications