5 ವರ್ಷದ ಹಸುಳೆ ಮೇಲೆ 52ರ ಕಾಮುಕನಿಂದ ರೇಪ್

ಆರೋಪಿಯನ್ನು ಹನುಮಾನ್ ಎಂದು ಗುರುತಿಸಲಾಗಿದೆ. ಕೇಶವಪುರಂನ ಖಾಸಗಿ ಕಂಪನಿಯೊಂದರಲ್ಲಿ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮಗುವಿನ ಅಪ್ಪ ಅಮ್ಮ ಇಲ್ಲದ ಸಮಯ ನೋಡಿ ಎರಡನೆ ಅಂತಸ್ತಿನಲ್ಲಿದ್ದ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ.
ನಂತರ ಮಗುವನ್ನು ರೇಪ್ ಮಾಡಿ, ಬೆದರಿಸಿದ್ದಾನೆ. ಮಗುವನ್ನು ಮತ್ತೆ ಮೊದಲನೇ ಮಹಡಿಗೆ ತಂದು ಬಿಟ್ಟಿದ್ದಾನೆ. ಮಗುವಿನ ಪೋಷಕರು ಮಗುವಿನ ಹರಿದ ಲಂಗ, ಕಾಲುಗಳಲ್ಲಿ ಹೆಪ್ಪುಗಟ್ಟಿದ್ದ ರಕ್ತದ ಕಲೆ ಕಂಡು ಬೆಚ್ಚುಬಿದ್ದಿದ್ದಾರೆ. ನಂತರ ಮಗುವಿನಿಂದ ನಡೆದ ಕಥೆಯನ್ನು ಕೇಳಿಸಿಕೊಂಡು ಪೊಲೀಸರ ಮೊರೆ ಹೋಗಿದ್ದಾರೆ.
ಸ್ಥಳೀಯ ಆಸ್ಪತ್ರೆಯಲ್ಲಿ ಮಗುವನ್ನು ಪರೀಕ್ಷಿಸಿದಾಗ, ಲೈಂಗಿಕ ಕಿರುಕುಳ ನೀಡಿರುವುದು ದೃಢಪಟ್ಟಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಡಿಸಿಪಿ ಬಿಎಸ್ ಜೈಸ್ವಾಲ್ ಹೇಳಿದ್ದಾರೆ.












Click it and Unblock the Notifications