ಫಾಸ್ಟ್ ಫುಡ್ ಕ್ಷೇತ್ರಕ್ಕೆ ರಿಲಯನ್ಸ್ ಲೇಟ್ ಎಂಟ್ರಿ

Reliance to enter fast-food sector
ಮುಂಬೈ, ಡಿ.13: ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಸಂಸ್ಥೆ ಈಗ ಫಾಸ್ಟ್ ಫುಡ್ ಕ್ಷೇತ್ರಕ್ಕೆ ಕಾಲಿರಿಸುವ ಚಿಂತನೆ ನಡೆಸಿದೆ. ವಿದ್ಯುತ್ ಕ್ಷೇತ್ರದಲ್ಲಿ ಸುಮಾರು 50 ಬಿಲಿಯನ್ ಡಾಲರ್ ಮೌಲ್ಯದ ಸಂಸ್ಥೆಯಾಗಿರುವ ರಿಲಯನ್ಸ್, ರೀಟೈಲ್ ಹಾಗೂ 4ಜಿ ವೈರ್ ಲೇಸ್ ಕ್ಷೇತ್ರದ ನಂತರ ಫಾಸ್ಟ್ ಫುಡ್ ಕ್ಷೇತ್ರಕ್ಕೆ ಕಾಲಿಡಲಿದೆ.

ಫೇಮ್ ಇಂಡಿಯಾದ ಸಿಒಒ ರಿಷಿ ನೇಗಿ ಅವರು ರಿಲಯನ್ಸ್ ನ ಹೊಸ ಯೋಜನೆಯ ನೇತೃತ್ವವಹಿಸಲಿದ್ದಾರೆ. ಕ್ವಿಕ್ ಸರ್ವಿಸ್ ರೆಸ್ಟೋರೆಂಟ್(QSR) ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಪ್ರಾಯೋಗಿಕವಾಗಿ ಆರಂಭಗೊಳ್ಳುವ ನಿರೀಕ್ಷೆಯಿದೆ.

ಫಾಸ್ಟ್ ಫುಡ್ ಗೆ ಡಿಮ್ಯಾಂಡ್ : ಭಾರತದಲ್ಲಿ ಫಾಸ್ಟ್ ಫುಡ್ ಕ್ಷೇತ್ರ ಪ್ರತಿವರ್ಷ ಶೇ. 25ರಷ್ಟು ಪ್ರಗತಿ ಕಾಣುತ್ತಿದೆ. ಈ ಕ್ಷೇತ್ರದಲ್ಲಿ ರಿಲಯನ್ಸ್ ಗೆ ಮ್ಯಾಕ್ ಡೊನಾಲ್ಡ್, ಡೋಮಿನೋಸ್ ಸಂಸ್ಥೆಗಳು ಪ್ರಬಲ ಸ್ಪರ್ಧಿಗಳಾಗಿದೆ.

ಫುಡ್ ಕೋರ್ಟ್ ಹಾಗೂ ಪ್ರತ್ಯೇಕ ಮಳಿಗೆಗಳ ಮಾದರಿಯಲ್ಲಿ ರಿಲಯನ್ಸ್ QSR ಆರಂಭವಾಗಲಿದೆ. ಭಾರತೀಯ, ಚೈನೀಸ್ ಹಾಗೂ ಇಟಾಲಿಯನ್ ಆಹಾರ ಶೈಲಿಯ ವಿಶಿಷ್ಟ ತಿನಿಸುಗಳು ಗ್ರಾಹಕರಿಗೆ ಲಭ್ಯವಾಗಲಿದೆ.

ಬೆಂಗಳೂರು, ದೆಹಲಿ ಹಾಗೂ ಮುಂಬೈನಲ್ಲಿ ಫಾಸ್ಟ್ ಫುಡ್ ಜಾಲ ಮೊದಲಿಗೆ ಆರಂಭಿಸಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.

ರೀಟೈಲ್ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ್ದು, ರಿಲಯನ್ಸ್ ಫ್ರೆಶ್, ಸೂಪರ್ ಹಾಗೂ ಮಾರ್ಟ್ ಗಳು ಸೇರಿದಂತೆ ಸುಮಾರು 1,146 ಮಳಿಗೆಗಳನ್ನು ತೆರೆಯಲಾಗಿದೆ. ಈಗ ತಾಜ್ ಗ್ರೂಪ್ ಹೋಟೆಲ್ ನಲ್ಲಿ ಹಿರಿಯ ವ್ಯವಸ್ಥಾಪಕನಾಗಿ ಅನುಭವವುಳ್ಳ ನೇಗಿ ಅವರ ಕೈಲಿ ರಿಲಯನ್ಸ್ ಫಾಸ್ಟ್ ಫುಡ್ ಭವಿಷ್ಯ ಅಡಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+