ಬಿಹಾರದ ಪಂಚಕೋಟಿ ಮಹಾಮುನಿಗೆ ನಯಾಪೈಸೆನೂ ಕೊಡದ ಸೋನಿ ಚಾನೆಲ್

kbc-winner-sushil-kumar-not-yet-given-5-crore
ಬೆಂಗಳೂರು, ಡಿ.12: ಮೊನ್ನೆ ದೀಪಾವಳಿ ದಿನ (ಅ 26) ಬಿಹಾರದ ಯುವಕ ಸುಶೀಲ್ ಭರ್ಜರಿಯಾಗಿ ಐದು ಕೋಟಿ ಬಹುಮಾನವನ್ನು ಗೆದ್ದುಕೊಂಡಿದ್ದೇ ಬಂತು ಇದುವರೆಗೆ ಕಾರ್ಯಕ್ರಮದ ಪ್ರಾಯೋಜಕರಾದ ಸೋನಿ ಟಿವಿ ಚಾನೆಲ್ ಒಂದು ನಯಾ ಪೈಸೆಯನ್ನೂ ಕೊಟ್ಟಿಲ್ಲ. ಅವರಿನ್ನೂ ಮಾಧ್ಯಮಗಳಲ್ಲಷ್ಟೇ ಕೋಟ್ಯಧಿಪತಿಯಾಗಿದ್ದಾರೆ.

ಬಿಹಾರದ 27 ವರ್ಷದ ಸುಶೀಲ್ ಕುಮಾರ್ ಅವರು ಕಳೆದ ಸಾಲಿನ 'ಕೌನ್ ಬನೇಗಾ ಕರೋಡ್ ಪತಿ' ಕ್ವಿಜ್ ಕಾರ್ಯಕ್ರಮದಲ್ಲಿ ಐದು ಕೋಟಿ ಬಹುಮಾನವನ್ನು ಗೆದ್ದುಕೊಂಡಿದ್ದನ್ನು ಸೋನಿ ಚಾನೆಲ್ ಇಡೀ ವಿಶ್ವಕ್ಕೆ ಡಂಗುರ ಸಾರಿತ್ತು. ಆದರೆ ಇದುವರೆಗೆ ದುಡ್ಡೇ ಕೊಟ್ಟಿಲ್ಲ ಎಂದು ಸ್ವತಃ ಸುಶೀಲ್ ಆತಂಕ ವ್ಯಕ್ತಡಿಸಿದ್ದಾರೆ.

ಬಹುಮಾನದ ಮೊತ್ತ ಯಾವಾಗ ವಿತರಿಸಲಾಗುತ್ತದೆ ಎಂಬುದರ ಬಗ್ಗೆ ಸೋನಿ ನನಗೆ ಯಾವುದೇ ಮಾಹಿತಿಯನ್ನೂ ನೀಡಿಲ್ಲ. ಅಸಲಿಗೆ ಷ್ಟು ಮೊತ್ತ ಬರುತ್ತದೆ ಎಂಬುದರ ಬಗ್ಗೆಯೂ ನನಗೆ ಅರಿವಿಲ್ಲ. ತೆರಿಗೆ ಕಡಿತ ಅದೂ ಇದೂ ಅಂತ ಮೈನಸ್ ಆಗಿ ಕೈಗೆ ಎಷ್ಟು ಬರುತ್ತದೋ, ಯಾವಾಗ ಬರುತ್ತದೂ ಆದೇವರೇ ಬಲ್ಲ ಎಂದು ಸುಶೀಲ್ ತಮ್ಮ ಹುಟ್ಟೂರಾದ ಮೀತಿಹಾರಿಯಲ್ಲಿ ತಿಳಿಸಿದ್ದಾರೆ.

ಈ ಮಧ್ಯೆ, ನೆರವು ಕೋರಿ ಇವರ ಮನೆಗೆ ದಾಳಿ ಮಾಡುವವರ ಸಂಖ್ಯೆ ದಿನೇ ದಿನೆ ಅಧಿಕವಾಗುತ್ತಿದೆ. ಇನ್ನು ದೂರದೂರಿಂದ ಅಂದರೆ ವಿದೇಶಗಳಿಂದಲೂ ಸಹಾಯ ಬಯಸಿ, ಸುಶೀಲ್ ಗೆ ದುಂಬಾಲು ಬೀಳುತ್ತಿದ್ದಾರೆ. ಬಿಹಾರ ಅಪಹರಣ ಪ್ರಕರಣಗಳಿಗೆ ಕುಖ್ಯಾತ. ಸದ್ಯ ಯಾರೂ ನನ್ನನ್ನು ಅಪಹರಿಸಿ, ಒತ್ತೆ ಹಣಕ್ಕೆ ಬೇಡಿಕೆಯಿಟ್ಟಿಲ್ಲ. ನನ್ನ ಪುಣ್ಯ ಎಂದು ಅವರು ಸಮಾಧಾನಪಟ್ಟುಕೊಂಡಿದ್ದಾರೆ.

ಕೆಬಿಸಿ ಕಾರ್ಯಕ್ರಮದ ನಿರೂಪಕ ಅಮಿತಾಭ್ ಬಚ್ಚನ್ ಮಾತ್ರ ಮೊಮ್ಮಗಳ ಜತೆ ನಲಿದಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+