ನರೇಂದ್ರ ಮೋದಿಗೆ ಪಾಕಿಸ್ತಾನದ ಆತ್ಮೀಯ ಆಹ್ವಾನ!

ಶನಿವಾರ ಅಹಮದಾಬಾದಿಗೆ ಬಂದಿಳಿದ ಕರಾಚಿಯ ವಾಣಿಜ್ಯೋದ್ಯಮಿಗಳು (KCCI) 'ಬನ್ನಿ ನಮ್ಮೂರಿಗೂ' ಎಂದು ಮೋದಿಗೆ ಆಮಂತ್ರಣವಿತ್ತಿದ್ದಾರೆ. 'ನಮಗೆ ಗುಜರಾತ್ ಮಾದರಿಯ ಅಭಿವೃದ್ಧಿ ಬೇಕಾಗಿದೆ. ಬನ್ನಿ, ನಮ್ಮ ಕಾರ್ಪೊರೇಟ್ ಉದ್ಯಮಿಗಳೊಂದಿಗೆ ನಿಮ್ಮ ಅಭಿವೃದ್ಧಿ ಮಂತ್ರ ಬೋಧಿಸಿ' ಎಂದು ಪಾಕ್ ಉದ್ಯಮಿಗಳು ಮೋದಿ ಅವರನ್ನು ಕೋರಿದ್ದಾರೆ. ಮೋದಿ ಪಾಕ್ ಆಹ್ವಾನವನ್ನು ಒಪ್ಪಿಕೊಂಡಿದ್ದು, ಸದ್ಯದಲ್ಲೇ ಕರಾಚಿಗೆ ತೆರಳಲಿದ್ದಾರೆ. ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ.












Click it and Unblock the Notifications