ಖ್ಯಾತ ವ್ಯಂಗ್ಯಚಿತ್ರಕಾರ ಮಾರಿಯೋ ಡಿ ಮಿರೆಂಡಾ ವಿಧಿವಶ
ಪಣಜಿ,
ಡಿ.11: ಪ್ರಸಿದ್ಧ ವ್ಯಂಗ್ಯಚಿತ್ರಕಾರ ಮಾರಿಯೋ ಡಿ ಮಿರೆಂಡಾ ಭಾನುವಾರ ಬೆಳಗ್ಗೆ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ದೀರ್ಘಕಾಲದ ಅನಾರೋಗ್ಯದಿಂದಾಗಿ ತಮ್ಮ ಪೂರ್ವಿಕರ ಮನೆಯಲ್ಲಿ ಕೊನೆಯುಸಿರೆಳೆದರು. ಅವರು 2002ರಲ್ಲಿ ಪದ್ಮಭೂಷಣ ಮತ್ತು 1988ರಲ್ಲಿ ಪದ್ಮಶ್ರೀ ಪುರಸ್ಕೃತರಾಗಿದ್ದರು. id="toptextpromo">ಭೌಗೋಳಿಕವಾಗಿ
ಮತ್ತು ಸಾಂಸ್ಕೃತಿಕವಾಗಿ ಗೋವಾವನ್ನು ಅಪ್ಪಿಕೊಂಡಿದ್ದ ಮಾರಿಯೋ ಕನ್ನಡಿಗರಿಗೆ ಚಿರಪರಿಚಿತರು. ಮಾರಿಯೋ, ಪತ್ನಿ ಹಬೀಬಾ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅನಾರೋಗ್ಯದಿಂದಾಗಿ ಮಾರಿಯೋ ಅವರು ಹಲವು ವರ್ಷಗಳಿಂದ ಚಿತ್ರ ರಚನೆಯನ್ನು ಸ್ಥಗಿತಗೊಳಿಸಿದ್ದರು. id='are-slot-1' class='oiad oi-axt oiadv'> id='top-searched-articles'>ಮಿಸ್
ಫೋನ್ಸಿಕಾ, ರಜನಿ ನೀಂಬೂ ಪಾನಿ, ಬಂಡಲ್ ದಾಸ್, ಗಾಡ್ಬೋಲ್, ನಪೋಲಿಯನ್ ಮಧ್ಯೆ ಬೆಹ್ರಾಂ ಕಾಂಟ್ರಾಕ್ಟರ್ (ಬ್ಯುಸಿ ಬಿ) ಪಾತ್ರಗಳಿಗೆ ಜೀವ ತುಂಬಿದ್ದ ಮಾರಿಯೋ, ಮುಂಬೈನ ಬಹಳಷ್ಟು ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಕಾರರಾಗಿ ಸೇವೆ ಸಲ್ಲಿಸಿದ್ದರು.











Click it and Unblock the Notifications