ಇನ್ಫಿಯಿಂದ 10 ಸಾವಿರ ನೇಮಕ, ಅರ್ಜಿ ಗುಜರಾಯಿಸಿ

ಈ ವಿಷಯವನ್ನು ತಿಳಿಸಿದ್ದು ಇನ್ಪೋಸಿಸ್‌ನ ಎಕ್ಸಿಕ್ಯೂಟಿವ್ ಕೋ-ಚೇರ್ಮನ್ ಆಗಿರುವ ಎಸ್ ಗೋಪಾಲಕೃಷ್ಣನ್ ಅವರು ನವದೆಹಲಿಯಲ್ಲಿ ನಡೆದ ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್‌ನ ಸಮಾರಂಭವೊಂದರಲ್ಲಿ.
ಪ್ರಸಕ್ತ ಹಣಕಾಸು ವರ್ಷದಲ್ಲಿ 35 ಸಾವಿರ ಉದ್ಯೋಗಿಗಳಿಗೆ ಕಂಪನಿಯಲ್ಲಿ ಕೆಲಸ ಕೊಟ್ಟಿದ್ದು, ಹಣಕಾಸು ವರ್ಷ ಮುಗಿಯುವುದರೊಳಗಾಗಿ ಇನ್ನೂ ಹತ್ತು ಸಾವಿರ ಜನರನ್ನು ನೇಮಕ ಮಾಡಿಕೊಳ್ಳುತ್ತಿದ್ದೇವೆ ಎಂದು ಕ್ರಿಸ್ ತಿಳಿಸಿದರು.
ಕಂಪನಿಯ ಮೊದಲ ಸಾಫ್ಟ್ ವೇರ್ ಅಭಿವೃದ್ಧಿ ಕೇಂದ್ರವನ್ನು ಪಶ್ಚಿಮ ಬಂಗಾಳದ ಕೊಲ್ಕತಾ ಬಳಿ ರಾಜರ್ಹಟ್ ಎಂಬಲ್ಲಿ ಪ್ರಾರಂಭಿಸಲಾಗುತ್ತಿದ್ದು, ಮುಂದಿನ ಮುರರಿಂದ ಆರು ತಿಂಗಳಲ್ಲಿ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ಅವರು ಕಂಪನಿಯ ಯೋಜನೆಗಳ ಬಗ್ಗೆ ವಿವರಿಸಿದರು.












Click it and Unblock the Notifications