ಸಾಲಕ್ಕೆ 'ಕಿಂಗ್ ಫಿಷರ್' ಹೆಸರು ಅಡವಿಟ್ಟ ಮಲ್ಯ
ನವದೆಹಲಿ,
ಡಿ 10: ಭಾರೀ ಸಂಕಷ್ಟದಲ್ಲಿರುವ ಕಿಂಗ್ ಫಿಷರ್ ಏರ್ಲೈನ್ಸ್ ಗೆ ಪಡೆಯಲಾದ ಸಾಲಕ್ಕೆ ಬದಲಿಯಾಗಿ ಮದ್ಯದೊರೆ ವಿಜಯ್ ಮಲ್ಯ 'ಕಿಂಗ್ ಫಿಷರ್' ಟ್ರೇಡ್ ಮಾರ್ಕ್ ರಿಜಿಸ್ಟರ್ಡ್ ಬ್ರಾಂಡ್ ಅನ್ನು ಅಡವಿಟ್ಟಿದ್ದಾರೆ. ರೇಟಿಂಗ್ ಕ್ರೆಡಿಟ್ ಎಜೆನ್ಸಿ ಪ್ರಕಾರ "ಕಿಂಗ್ ಫಿಷರ್" ಬ್ರಾಂಡ್ ನ ಇಂದಿನ ಮಾರುಕಟ್ಟೆ ಮೌಲ್ಯ ಸುಮಾರು 4110 ಕೋಟಿ !! id="toptextpromo">ವಿವಿಧ
ಕಾರಣಗಳಿಂದ ಕಿಂಗ್ ಫಿಷರ್ ಏರ್ಲೈನ್ಸ್ ಸಾವಿರಾರು ಕೋಟಿ ನಷ್ಟ ಅನುಭವಿಸುತ್ತಿದೆ. ಹೀಗಾಗಿ ಪಡೆದ ಸಾಲ ಹಿಂದಿರುಗಿಸಲು ಈ ನಿರ್ಧಾರ ತೆಗೆದು ಕೊಂಡಿದ್ದಾರೆ. ಅಲ್ಲದೇ, ಮುಂಬೈ ನಲ್ಲಿರುವ ಸಂಸ್ಥೆಯ ಕಿಂಗ್ ಫಿಷರ್ ಹೌಸ್, ಗೋವಾದಲ್ಲಿರುವ ಆಸ್ತಿ ಮತ್ತು ತನ್ನ ಬಳಿ ಇರುವ ಹೆಲಿಕಾಪ್ಟರ್ ಗಳನ್ನೂ ಮಲ್ಯ ಒತ್ತೆ ಇಟ್ಟಿದ್ದಾರೆ. id='are-slot-1' class='oiad oi-axt oiadv'> id='top-searched-articles'>248
ಕೋಟಿ ಸಾಲಕ್ಕೆ ಮಲ್ಯ ತಾವೇ ವೈಯಕ್ತಿಕ ಬಾಂಡ್ ನೀಡಿದ್ದಾರೆ. ಮಲ್ಯ ಒಟ್ಟು 6420 ಕೋಟಿ ಬಾಹ್ಯ ಸಾಲ ಹೊಂದಿದ್ದಾರೆ. ಕಿಂಗ್‌ಫಿಶರ್‌ಗೆ ಸಾಲ ಕೊಟ್ಟಿರುವ 11ಬ್ಯಾಂಕುಗಳ ಪೈಕಿ ಮುಂಚೂಣಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸದ್ಯಕ್ಕೆ ಇನ್ನಷ್ಟು ಸಾಲ ಕೊಡುವ ಪ್ರಸ್ತಾವ ಇಲ್ಲ ಎಂದಿದೆ ಎಂದು ಹಣಕಾಸು ಖಾತೆಯ ಸಹಾಯಕ ಸಚಿವ ನಮೋ ನಾರಾಯಣ್ ಮೀನ ಲಿಖಿತ ಉತ್ತರದಲ್ಲಿ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದಾರೆ.











Click it and Unblock the Notifications