ಬೆಂಗಳೂರಿಗೆ ಹೊಸ ವೇಗ ಮಿತಿ, ತಪ್ಪಿದರೆ ಅಧೋಗತಿ!

ಹೊಸ ನಿಯಮದ ಪ್ರಕಾರ ಯಾವುದೇ ಮಾದರಿಯ ಕಾರುಗಳನ್ನು ಸಿಟಿ ರಸ್ತೆಯಲ್ಲಿ ಪ್ರತಿಗಂಟೆಗೆ 60 ಕಿ.ಮೀ.ಗಿಂತ ವೇಗವಾಗಿ ಚಾಲನೆ ಮಾಡಬಾರದು. ಆದರೆ ಹೆಬ್ಬಾಳದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಮಾತ್ರ ಪ್ರತಿಗಂಟೆಗೆ 80 ಕಿ.ಮೀ. ವೇಗದಲ್ಲಿ ಚಾಲನೆ ಮಾಡಲು ಅವಕಾಶವಿದೆ.
ಬಸ್ಸು, ವ್ಯಾನು, ಟ್ರಕ್ ಮತ್ತು ಮೆಟಡೋರ್ ವಾಹನಗಳ ವೇಗಮಿತಿ ಗಂಟೆಗೆ 50 ಕಿ.ಮೀ. ಬೈಕ್ ಮತ್ತು ಸ್ಕೂಟರ್ ಸವಾರರಿಗೆ ಪ್ರತಿಗಂಟೆಗೆ 50 ಕಿ.ಮೀ.ಗಿಂತ ವೇಗವಾಗಿ ಸಾಗಲು ಅವಕಾಶವಿಲ್ಲ.
ಮೊಪೆಡ್, ಆಟೋ ರಿಕ್ಷಾ, ಮೂರು ಚಕ್ರದ ವಾಹನಗಳು ಮತ್ತು ಟೆಂಪೊಗಳು ಪ್ರತಿಗಂಟೆಗೆ 40 ಕಿ.ಮೀ. ವೇಗದಲ್ಲಿ ಸಾಗಬಹುದು. ಟ್ರಾಕ್ಟರ್, ಟೈಲರ್ ಗಳಂತಹ ವಾಹನಗಳು ಪ್ರತಿಗಂಟೆಗೆ 20 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಪ್ರಯಾಣಿಸಲು ಅವಕಾಶವಿಲ್ಲ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪ್ರಯಾಣಿಸುವಾಗ ನಿಮ್ಮ ಕಣ್ಣು ಸ್ಪೀಡೋಮೀಟರ್ ಮೇಲಿರಲಿ. ಇಲ್ಲದಿದ್ದರೆ ಟ್ರಾಫಿಕ್ ಪೊಲೀಸರಿಗೆ ದಂಡ ಪಾವತಿಸುವುದು ಅನಿವಾರ್ಯ. ಎಲ್ಲಾದರೂ ಹೆಚ್ಚು ವೇಗದಲ್ಲಿ ಸಾಗಿ ಟ್ರಾಫಿಕ್ ಪೊಲೀಸರಿಗೆ ಸಿಕ್ಕಿಬಿದ್ದರೆ ಸೂಕ್ತ ಶುಲ್ಕ ಪಾವತಿಸಲು ಮರೆಯದಿರಿ.












Click it and Unblock the Notifications