ರೇಪ್ ಮಾಡಿ ಎಂಎಂಎಸ್ ಮಾಡ್ತೀನಿ ಕುಣಿ ಅಂದ
ಕಾಲೇಜಿಗೆ ತೆರಳುತ್ತಿದ್ದ ಯುವತಿಯನ್ನು ಅಡ್ಡಗಟ್ಟಿದ್ದ 22 ವರ್ಷದ ಯುವಕ ಚಾಕು ತೋರಿಸಿ ಬೆದರಿಸಿ ಆಕೆಯನ್ನು ಅನುಭವಿಸಿದ್ದಾರೆ. ಯುವತಿ ಮನೆ ಸಮೀಪದ ಖಾಲಿ ನಿವೇಶನಕ್ಕೆ ಆಕೆಯನ್ನು ಎಳೆದೊಯ್ದು ಬಲವಂತವಾಗಿ ಮಾನಹಾನಿ ಮಾಡಿದ್ದಾನೆ.
ನಂತರ ನಗ್ನ ನರ್ತನ ಮಾಡು ಎಂಎಂಎಸ್ ಮಾಡ್ತೀನಿ ಎಂದು ಕುಣಿದಾಡಿದ್ದಾನೆ. ನಾನು ಹೇಳಿದಂತೆ ಕೇಳಲಿಲ್ಲ ಎಂದರೆ ಚಾಕುವಿನಿಂದ ಚುಚ್ಚಿಬಿಡ್ತೀನಿ ಹುಷಾರ್ ಎಂದು ಬೆದರಿಸಿದ್ದಾನೆ.
ಯುವತಿಗೆ ಬೆದರಿಕೆ ಒಡ್ಡಿ ವಿಕೃತವಾಗಿ ನಡೆದುಕೊಂಡ ಯುವಕನನ್ನು ಕಾಲೇಜು ವಿದ್ಯಾರ್ಥಿ ಹಿತೇಷ್ ಎಂದು ಪೊಲೀಸರು ಗುರುತಿಸಿದ್ದಾರೆ.
ಯುವತಿಯ ಪೋಷಕರು ಪೊಲೀಸರಿಗೆ ವಿಷಯ ತಿಳಿಸಿದ ಮೇಲೆ, ಯುವತಿಯ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ವೈದ್ಯಕೀಯ ಪರೀಕ್ಷೆ ವರದಿ ಪ್ರಕಾರ ಆಕೆ ಮೇಲೆ ಅತ್ಯಾಚಾರ ನಡೆದಿರುವುದು ಸಾಬೀತಾಗಿದೆ.
ಭಗ್ನ ಪ್ರೇಮಿ ಕೃತ್ಯ?: ಪೊಲೀಸರಿಗೆ ದೂರು ನೀಡಿದ್ದೀವಿ. ನಂಗೆ ಕಾಟ ಕೊಡ್ಬೇಡ ಎಂದು ಯುವತಿ ಪರಿ ಪರಿಯಾಗಿ ಬೇಡಿಕೊಂಡರೂ, ಬೆದರದ ಹಿತೇಷ್ ಪ್ರತಿದಿನ ಕರೆ ಮಾಡಿ ಕಿರುಕುಳ ನೀಡುತ್ತಿದ್ದಾನೆ. ಹಿತೇಷ್ ಬಂಧಿಸಲು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಹಿತೇಷ್ ಆಕೆಯನ್ನು ಪ್ರೀತಿಸುತ್ತಿದ್ದನಂತೆ, ಆಕೆ ಒಪ್ಪಲಿಲ್ಲವಂತೆ ಅದಕ್ಕೆ ಈ ರೀತಿ ಕೃತ್ಯ ಎಸೆಗಿದ್ದಾನೆ ಎಂಬ ಸುದ್ದಿಯಿದೆ. ಆದರೆ, ಹಿತೇಷ್ ಪ್ರೀತಿಸುತ್ತಿದ್ದ ವಿಷಯವನ್ನು ಯುವತಿ ಪೊಲೀಸರಿಗೆ ಹೇಳಿಲ್ಲ. ತನಿಖೆ ಮುಂದುವರೆದಿದೆ.