ಮುನ್ಸಿಪಾಲಿಟಿ ಜವಾನನ ಮನೆಯಲ್ಲಿ ಸಿಕ್ತು 10 ಕೋಟಿ ಲಂಚದ ಹಣ!

ನರೇಂದ್ರ ದೇಶ್ ಮುಖ್ ಎಂಬ ಜವಾನನ ನಿವಾಸದ ಮೇಲೆ ಲೋಕಾಯುಕ್ತ ಎಸ್ಪಿ ಅರುಣ್ ಮಿಶ್ರಾ ನೇತೃತ್ವದಲ್ಲಿ 15 ಅಧಿಕಾರಿಗಳನ್ನೊಳಗೊಂಡ ಲೋಕಾಯುಕ್ತ ತಂಡ ಬೆಳಗ್ಗೆಯೇ ದಾಳಿ ನಡೆಸಿತ್ತು.
ನರೇಂದ್ರ ದೇಶ್ ಮುಖ್ ಹೆಸರಿನಲ್ಲಿ ಎರಡು ಮನೆಗಳು, 18 ಎಕರೆ ಜಮೀನು, ಒಂದು ಪೌಲ್ಟ್ರಿ ಫಾರಂ ಮತ್ತು ಒಂದು ಫಾರಂ ಹೌಸ್ ಇರುವ ಬಗ್ಗೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಿಶ್ರಾ ತಿಳಿಸಿದ್ದಾರೆ.
ಇಷ್ಟೇ ಅಲ್ಲದೆ, ಮುಂಬೈನಲ್ಲಿ ಒಂದು ಫ್ಯಾಕ್ಟರಿ ಮತ್ತು ಹೋಟೆಲಿನಲ್ಲಿ ಈ ಜವಾನ ಷೇರುಗಳನ್ನೂ ಹೊಂದಿದ್ದಾನೆ. ಜತೆಗೆ ಇವನ ಹೆಸರಿನಲ್ಲಿ 10 ಬ್ಯಾಂಕ್ ಖಾತೆಗಳು ಮತ್ತು ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ನೀರಾವರಿ ಭೂಮಿಯೂ ಇದೆ ಎಂದು ಮಿಶ್ರಾ ಹೇಳಿದ್ದಾರೆ.












Click it and Unblock the Notifications