ಸಿಟಿಗ್ರೂಪ್ ನಿಂದ 4,500 ಉದ್ಯೋಗಿಗಳು ವಜಾ

CEO Vikram Pandit
ನ್ಯೂಯಾರ್ಕ್, ಡಿ.7: ಅಮೆರಿಕದ ಪ್ರತಿಷ್ಠಿತ ಆರ್ಥಿಕ ಸಂಸ್ಥೆ ಸಿಟಿಗ್ರೂಪ್ ಮುಂಬರುವ ಕೆಲ ತಿಂಗಳುಗಳಲ್ಲಿ ಸುಮಾರು 4,500 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಿದೆ ಎಂದು ಸಿಇಒ ವಿಕ್ರಮ್ ಪಂಡಿತ್ ಹೇಳಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದ ಕೊನೆ ತ್ರೈಮಾಸಿಕದಲ್ಲಿ 267,000 ಉದ್ಯೋಗಿಗಳಲ್ಲಿ ಶೇ.2ರಷ್ಟು ಮಾನವ ಸಂಪನ್ಮೂಲ ಕಡಿಮೆಯಾಗಲಿದೆ. ಇದು ವಿಶ್ವದ ಎಲ್ಲಾ ಕೇಂದ್ರಗಳಲ್ಲೂ ಅನ್ವಯವಾಗಲಿದೆ ಎಂದು ಸಂಸ್ಥೆ ಹೇಳಿದೆ.

ಉದ್ಯೋಗಿಗಳನ್ನು ವಜಾ ಮಾಡಿ ಸುಮಾರು 400 ಮಿಲಿಯನ್ ಡಾಲರ್ ಉಳಿಸುವ ಇರಾದೆ ಸಂಸ್ಥೆಗಿದೆ.

ಸಿಟಿಗ್ರೂಪ್ ನ ಬ್ಯಾಕ್ ಆಫೀಸ್, ಬಂಡವಾಳ ಬ್ಯಾಂಕಿಂಗ್ ಕ್ಷೇತ್ರ ಇನ್ನಿತರೆ ವಿಭಾಗಗಳಲ್ಲಿ ಹೆಚ್ಚಿನ ಉದ್ಯೋಗ ಕಡಿತ ಉಂಟಾಗಲಿದೆ. ಖರ್ಚು ಕಮ್ಮಿ ಮಾಡಿಕೊಳ್ಳುವ ಸಿಟಿಗ್ರೂಪ್ ಯೋಜನೆ ಆರ್ಥಿಕ ವರ್ಷದ ಆರಂಭದಲ್ಲೇ ಜಾರಿಗೊಂಡಿತ್ತು. 2011ರಲ್ಲಿ ಸುಮಾರು 1.4 ಬಿಲಿಯನ್ ಡಾಲರ್ ಉಳಿತಾಯ ಕಾಣಲಾಗಿದೆ ಎಂದು ಸಿಇಒ ಪಂಡಿತ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+